ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ ಯುವಕನ ʼಮೂನ್ ವಾಕ್ʼ 31-03-2021 6:41AM IST / No Comments / Posted In: Latest News, Entertainment ಡಾನ್ಸರ್ಗಳು ಮಾಡುವ ಮೂನ್ವಾಕ್ ಸ್ಟೆಪ್ನ್ನ ನೋಡೋದೇ ಕಣ್ಣಿಗೆ ಪರಮಾನಂದ. ಮೈಕೆಲ್ ಜಾಕ್ಸನ್ರಂತೆ ಮೂನ್ ವಾಕ್ ಮಾಡಲು ಅನೇಕ ನೃತ್ಯಗಾರರು ಪ್ರಯತ್ನ ಪಡ್ತಾರೆ. ಈ ಮೂನ್ವಾಕ್ನ ಕಾರಣಕ್ಕೆ ಪೊಲ್ಯಾಂಡ್ನ ನೃತ್ಯಗಾರ ಕಾಮಿಲ್ ಸ್ಜೆಪೆನ್ಕೊವ್ಸ್ಕಿ ಎಂಬವರು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ. ಟ್ವಿಟರ್ನಲ್ಲಿ ಈ ವಿಡಿಯೋವನ್ನ ಪೋಸ್ಟ್ ಮಾಡಲಾಗಿದ್ದು, ನಾನು ಈ ವಿಡಿಯೋವನ್ನ 100ಕ್ಕೂ ಹೆಚ್ಚು ಬಾರಿ ನೋಡಿದೆ ಎಂದು ಶೀರ್ಷಿಕೆಯನ್ನ ನೀಡಲಾಗಿದೆ. ‘ವಿಶ್ವ ಇಡ್ಲಿ ದಿನಾಚರಣೆ’: ಫೋಟೋ ಹಾಕಿ ಸಂಭ್ರಮಿಸಿದ ಇಡ್ಲಿ ಪ್ರಿಯರು ವಿಡಿಯೋದಲ್ಲಿ ಕಾಮಿಲ್ ಕಾರಿನಿಂದ ಕೆಳೆಗಿಳಿದು ಝೀಬ್ರಾ ಪಟ್ಟಿಯ ಮೇಲೆ ಅತ್ಯದ್ಭುತ ರೀತಿಯಲ್ಲಿ ಮೂನ್ವಾಕ್ ಸ್ಟೆಪ್ನ್ನು ಪ್ರದರ್ಶಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಯರ್ರಾಬಿರ್ರಿ ವೈರಲ್ ಆಗಿದ್ದು, 7.3 ಮಿಲಿಯನ್ಗೂ ಹೆಚ್ಚು ಲೈಕ್ಸ್ ಸಂಪಾದಿಸಿದೆ. I’ve watched the video 100 times now and I’m still in awe. Further, how the woman just walks by like this is normal. pic.twitter.com/UXgwxKtGok — David Herrmann (@herrmanndigital) March 27, 2021