alex Certify ನಿರಾಶ್ರಿತನಿಗೆ ಹರಿದು ಬಂತು ನೆರವಿನ ಮಹಾಪೂರ: ಭಾವುಕನಾದ ವ್ಯಕ್ತಿ ವಿಡಿಯೋ ವೈರಲ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರಾಶ್ರಿತನಿಗೆ ಹರಿದು ಬಂತು ನೆರವಿನ ಮಹಾಪೂರ: ಭಾವುಕನಾದ ವ್ಯಕ್ತಿ ವಿಡಿಯೋ ವೈರಲ್​​

ಅಮೆರಿಕದ ನಿರಾಶ್ರಿತನೊಬ್ಬನಿಗೆ ಅಪರಿಚಿತರು ಬರೋಬ್ಬರಿ 12 ಲಕ್ಷ ರೂಪಾಯಿ ದೇಣಿಗೆ ರೂಪದಲ್ಲಿ ನೀಡಿದ್ದು ಇದನ್ನ ಸ್ವೀಕರಿಸಿದ ವ್ಯಕ್ತಿ ಕಣ್ಣೀರು ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

46 ವರ್ಷದ ಮೈಕ್​ ಎಂಬವರು ಮನೆಯೇ ಇಲ್ಲದ ಕಾರಣ ನಿರಾಶ್ರಿತರಾಗಿದ್ದರು. ಒಂದು ದಿನ 24 ವರ್ಷದ ವ್ಲೋಗರ್​ ಫಿಲಿಫ್​ ಎಂಬವರು ಕಾರಿನ ಗಾಜನ್ನ ಸ್ವಚ್ಛಗೊಳಿಸಲು ಮುಂದಾದ ವೇಳೆ ಮೈಕ್​ರ ಅದೃಷ್ಟ ಬದಲಾಗಿದೆ.

ಫಿಲಿಪ್​ ಮೊದಲು ಮೈಕ್​ಗೆ ಕಾರಿನ ಗಾಜನ್ನ ಸ್ವಚ್ಛಗೊಳಿಸಲು ಅವಕಾಶ ನೀಡಿರಲಿಲ್ಲ. ಆದರೆ ಒಬ್ಬನೇ ಒಂಟಿಯಾಗಿ ಕುಳಿತಿದ್ದ ಮೈಕ್​ರನ್ನ ನೋಡಿದ ಫಿಲಿಪ್​ ಆತನನ್ನ ಕಾರಿನೊಳಗೆ ಕರೆದು ಸ್ಯಾಂಡ್​ವಿಚ್​ ನೀಡಿದ್ದರು.

ಹೆಲ್ಮೆಟ್‌ ಧರಿಸದ ಗರ್ಭಿಣಿಯನ್ನು 3 ಕಿ.ಮೀ. ನಡೆಸಿದ ಪೊಲೀಸ್‌ ಅಧಿಕಾರಿ

ಇದಾದ ಬಳಿಕ ಇವರಿಬ್ಬರ ನಡುವೆ ಸ್ನೇಹ ಬಾಂದವ್ಯ ಮೂಡಿದೆ. ಕಾರಿನಲ್ಲಿ ಇವರಿಬ್ಬರ ನಡುವೆ ನಡೆಯುತ್ತಿದ್ದ ಸಂಭಾಷಣೆಗಳನ್ನ ರೆಕಾರ್ಡ್ ಮಾಡಿ ಫಿಲಿಪ್​ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡ್ತಿದ್ರು. ಮೈಕ್​ರ ಜೀವನದ ಕತೆಯನ್ನ ಕೇಳಿದ ಅನೇಕರು ಮರುಗಿದ್ರು. ಪರಿಣಾಮ ಮೈಕ್​ಗಾಗಿ ದೇಣಿಗೆ ಸಂಗ್ರಹವಾಗೋಕೆ ಶುರುವಾಯ್ತು.

12 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿದ ಫಿಲಿಪ್​​ ಹಣವನ್ನ ಮೈಕ್​ಗೆ ನೀಡಿದ್ದಾರೆ. ಈ ಹಣವನ್ನ ನೋಡಿದ ಮೈಕ್ ಭಾವುಕಾರದ್ರು. ಅಲ್ಲದೇ ಫಿಲಿಪ್​ ಇದು ನನ್ನ ಜೀವನದ ಅತ್ಯಮೂಲ್ಯ ಕ್ಷಣ ಎಂದು ಹೇಳಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...