ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ ತಮ್ಮ ಗರ್ಲ್ಫ್ರೆಂಡ್ ತಾನಿಯಾ ಶ್ರಾಫ್ ಜೊತೆಗಿನ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ತಾನಿಯಾ ಶ್ರಾಫ್ ಬರ್ತಡೇ ದಿನ ಅಹಾನ್ ಶೆಟ್ಟಿ ಕೆಲ ಸುಂದರ ಫೋಟೋಗಳನ್ನ ಹಂಚಿಕೊಂಡಿದ್ದಾರೆ.
ಬಾಲ್ಯದ ಗೆಳತಿ ಜೊತೆಗಿನ ಹಳೆಯ ಫೋಟೋ ಶೇರ್ ಮಾಡಿರುವ ಅಹಾನ್, ಹ್ಯಾಪಿ ಬರ್ತಡೇ ಬೆಬೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋಗೆ ತಾನ್ಯಾ ಐ ಮಿಸ್ ಯೂ ಎಂದು ಕಮೆಂಟ್ ಹಾಕಿದ್ದನ್ನ ನೋಡ್ತಿದ್ರೆ ಲವ್ ಬರ್ಡ್ಸ್ ಬರ್ತಡೇ ದಿನವನ್ನ ಒಟ್ಟಿಗೆ ಎಂಜಾಯ್ ಮಾಡೋಕೆ ಸಾಧ್ಯವಾಗಿಲ್ಲ ಎಂದೆನಿಸುತ್ತಿದೆ. ಇನ್ಸ್ಟಾಗ್ರಾಂ ಪೋಸ್ಟ್ ಮಾತ್ರವಲ್ಲದೇ ಸ್ಟೋರಿ ವಿಭಾಗದಲ್ಲೂ ಫೋಟೋಗಳನ್ನ ಶೇರ್ ಮಾಡಿರುವ ಅಹಾನ್, ಐ ಲವ್ ಯೂ ಎಂದು ಬರೆದುಕೊಂಡಿದ್ದಾರೆ.
ತಾನಿಯಾ ಶ್ರಾಫ್ ಮುಂಬೈನಲ್ಲಿ ಡಿಸೈನರ್ ಆಗಿ ಕೆಲಸ ಮಾಡ್ತಿದ್ದಾರೆ. ಅಹಾನ್ ಹಾಗೂ ತಾನಿಯಾ ಬಾಲ್ಯದ ಸ್ನೇಹಿತರೂ ಕೂಡ ಹೌದು. ತಾನಿಯಾಗೆ ಅಹಾನ್ ಸಹೋದರಿ ಆತಿಯಾ ಶೆಟ್ಟಿ ಕೂಡ ಒಳ್ಳೆಯ ಗೆಳತಿಯಾಗಿದ್ದು ಆಕೆ ಕೂಡ ಇನ್ಸ್ಟಾಗ್ರಾಂನಲ್ಲಿ ತಾನಿಯಾಗೆ ವಿಶ್ ಮಾಡಿದ್ದಾರೆ.
https://www.instagram.com/p/CNAHC2XAveD/?utm_source=ig_web_copy_link
https://www.instagram.com/p/B47lcIDAbUo/?utm_source=ig_web_copy_link
https://www.instagram.com/p/BvmJ5nHgmlG/?utm_source=ig_web_copy_link