ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ‘ಕಣ್ಣು ಹೊಡಿಯಾಕ’ ವಿಡಿಯೋ ಸಾಂಗ್ ಅನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ, ತೆಲುಗು ವರ್ಷನ್ ಕಣ್ಣೇ ಅದಿರಿಂದಿ ಹಾಡನ್ನು ಕೂಡ ರಿಲೀಸ್ ಮಾಡಲಾಗಿದೆ. ಈ ಹಾಡು ಬಿಡುಗಡೆಯಾದ 30 ನಿಮಿಷಗಳಲ್ಲಿ ಕನ್ನಡದಲ್ಲಿ 73 ಸಾವಿರ ತೆಲುಗಿನಲ್ಲಿ 30 ಸಾವಿರ ವೀಕ್ಷಣೆ ಪಡೆದುಕೊಂಡಿದೆ.
‘ಹೀರೋ’ ಚಿತ್ರದ ‘ಎದೆಯಿಂದ ದೂರವಾಗಿ’ ವಿಡಿಯೋ ಸಾಂಗ್ ರಿಲೀಸ್
‘ರಾಬರ್ಟ್’ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಕೂಡ ಬಂಡವಾಳ ಹೂಡಿದ್ದು ಆಶಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಶಿವರಾಜ್ ಕೆ ಆರ್ ಪೇಟೆ, ಚಿಕ್ಕಣ್ಣ, ಜಗಪತಿ ಬಾಬು, ರವಿಶಂಕರ್, ರವಿಕಿಶನ್, ದೇವರಾಜ್ ಸೇರಿದಂತೆ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
https://www.youtube.com/watch?v=xkTCTrch6c8&list=LL&index=3
https://www.youtube.com/watch?v=vmB8qNLAGJI&list=LL&index=2