
ಟೀಂ ಇಂಡಿಯಾ ಮಾಜಿ ಆಟಗಾರ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. 47 ವರ್ಷದ ಮಾಜಿ ಕ್ರಿಕೆಟಿಗ ಶನಿವಾರ ಟ್ವಿಟರ್ನಲ್ಲಿ ಈ ವಿಚಾರವನ್ನ ದೃಢಪಡಿಸಿದ್ದಾರೆ.
ಕೊರೊನಾ ಸೋಂಕಿನಿಂದ ದೂರ ಇರಬೇಕು ಎಂದು ಸಾಕಷ್ಟು ಮುಂಜಾಗ್ರತೆ ವಹಿಸಿದ ಬಳಿಕವೂ ನಾನು ವೈರಸ್ ದಾಳಿಗೆ ತುತ್ತಾಗಿದ್ದಾನೆ. ನನಗೆ ಕೊರೊನಾ ಪಾಸಿಟಿವ್ ಬಂದಿದ್ದು ಕೆಲ ಸೌಮ್ಯ ಲಕ್ಷಣಗಳನ್ನ ಹೊಂದಿದ್ದೇನೆ. ಮನೆಯ ಇತರೆ ಸದಸ್ಯರು ಕೊರೊನಾ ನೆಗೆಟಿವ್ ವರದಿ ಹೊಂದಿದ್ದಾರೆ.
ನಾನು ಮನೆಯಲ್ಲೇ ಕ್ವಾರಂಟೈನ್ ಆಗಿದ್ದು ವೈದ್ಯರು ಹೇಳಿದ ಎಲ್ಲಾ ಸೂಚನೆಗಳನ್ನ ಪಾಲಿಸುತ್ತಿದ್ದೇನೆ. ದೇಶದಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯ ಲೋಕಕ್ಕೆ ನನ್ನ ಧನ್ಯವಾದ ಅರ್ಪಿಸುವೆ. ಎಲ್ಲರೂ ಕಾಳಜಿಯಿಂದಿರಿ ಎಂದು ಸಚಿನ್ ಟ್ವೀಟಾಯಿಸಿದ್ದಾರೆ.