ಕೆಲವು ಷರತ್ತುಗಳ ಅಡಿಯಲ್ಲಿ ಪಿಎಫ್ ಹೂಡಿಕೆ ಮೇಲೆ ತೆರಿಗೆ ಮುಕ್ತ ಬಡ್ಡಿ ಮಿತಿಯನ್ನು ಸರ್ಕಾರ 5 ಲಕ್ಷ ರೂಪಾಯಿಗೆ ಹೆಚ್ಚಿಸಿದೆ. ಈ ಹೆಚ್ಚಿದ ತೆರಿಗೆ ವಿನಾಯಿತಿ ಮಿತಿಯು ಉದ್ಯೋಗದಾತನ ಕೊಡುಗೆ ಇಲ್ಲದಿರುವ ಪಿಎಫ್ ಖಾತೆದಾರರಿಗೆ ಮಾತ್ರ ಅನ್ವಯಿಸುತ್ತದೆ.
ತಜ್ಞರ ಪ್ರಕಾರ, ಈ ಮಿತಿ ಕೆಲವು ಷರತ್ತುಗಳ ಅಡಿಯಲ್ಲಿ ಮಾತ್ರ ಅನ್ವಯಿಸುತ್ತದೆ. ಖಾಸಗಿ ವಲಯದ ಉದ್ಯೋಗಿಗಳಿಗೆ ಇದ್ರಿಂದ ಪ್ರಯೋಜನವಾಗುವುದಿಲ್ಲ. ನೌಕರರ ಭವಿಷ್ಯ ನಿಧಿ ಮತ್ತು ಕಾಯ್ದೆ 1952 ರ ಪ್ರಕಾರ, ಉದ್ಯೋಗಿ ಹಾಗೂ ಉದ್ಯೋಗದಾತ ಇಬ್ಬರೂ ಕೊಡುಗೆ ನೀಡಬೇಕು. ಇಬ್ಬರೂ ಕಡ್ಡಾಯವಾಗಿ ಶೇಕಡಾ 12ರಷ್ಟು ಕೊಡುಗೆ ನೀಡಬೇಕಾಗುತ್ತದೆ. ಉದ್ಯೋಗದಾತರ ಕೊಡುಗೆ ಇಲ್ಲದೆ, ನೌಕರನು ತನ್ನ ಸ್ವಂತ ಇಪಿಎಫ್ ಖಾತೆಗೆ ಕೊಡುಗೆ ನೀಡಲು ಸಾಧ್ಯವಿಲ್ಲ. ಹಾಗಾಗಿ ಈ ನೌಕರರು ಹಣಕಾಸಿನ ವರ್ಷದಲ್ಲಿ 2.5 ಲಕ್ಷದವರೆಗೆ ತೆರಿಗೆ ಮುಕ್ತ ಬಡ್ಡಿಯನ್ನು ಗಳಿಸಬಹುದು. ಐದು ಲಕ್ಷದ ಮಿತಿ ಇವರಿಗೆ ಅನ್ವಯವಾಗುವುದಿಲ್ಲ.
ಸರ್ಕಾರಿ ಖಾತೆಗಳ ವಾರ್ಷಿಕ ಸಮಾಪ್ತಿಗಾಗಿ RBI ನಿಂದ ವಿಶೇಷ ಮಾರ್ಗಸೂಚಿ
ಸರ್ಕಾರಿ ನೌಕರರಿಗೆ ಇದ್ರಿಂದ ಲಾಭವಿದೆ ಎನ್ನಬಹುದು. ಸರ್ಕಾರ ತನ್ನ ನೌಕರರಿಗೆ ಪಿಎಫ್ ಸೌಲಭ್ಯ ನೀಡುವುದಿಲ್ಲ. ಅದು ತನ್ನ ಕೊಡುಗೆಯನ್ನು ನೌಕರರ ಪಿಂಚಣಿ ನಿಧಿಗೆ ನೀಡುತ್ತದೆ. ಇಲ್ಲಿ ಉದ್ಯೋಗದಾತ ಯಾವುದೇ ಕೊಡುಗೆ ನೀಡದ ಕಾರಣ, ಸರ್ಕಾರಿ ನೌಕರರು ಹಣಕಾಸಿನ ವರ್ಷದಲ್ಲಿ 5 ಲಕ್ಷದವರೆಗೆ ತೆರಿಗೆ ಮುಕ್ತ ಬಡ್ಡಿಯನ್ನು ಗಳಿಸಬಹುದು.