ನಗುವಂತೆ ಮಾಡಿದೆ unworried ಶಬ್ದಕ್ಕೆ ʼಗೂಗಲ್ʼ ನೀಡಿದ ಅರ್ಥ 26-03-2021 4:55PM IST / No Comments / Posted In: Karnataka, Latest News ಇಂಗ್ಲಿಷ್ ಭಾಷೆಯ unworried ಎಂಬ ಶಬ್ದದ ಅರ್ಥ ಚಿಂತೆ ಇಲ್ಲದವನು ಅಥವಾ ತಲೆಕೆಡಿಸಿಕೊಳ್ಳದೇ ಇರೋದು ಎಂದಾಗಿದೆ. ಆದರೆ ಇದೀಗ ಈ ಶಬ್ದದ ಅರ್ಥವೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಿದೆ. ಗೂಗಲ್ ಗೆ unworried ಎಂಬ ಶಬ್ದವನ್ನ ಭಾಷಾಂತರ ಮಾಡಲು ಹೇಳಿದರೆ ಅವಿವಾಹಿತ ಎಂದು ತೋರಿಸುತ್ತಿದೆ. ಹಿಂದಿ ಭಾಷೆಯಲ್ಲೂ ಇದೇ ರೀತಿಯ ಫಲಿತಾಂಶ ಲಭ್ಯವಾಗಿದೆ. ಟ್ವಿಟರ್ನಲ್ಲಿ ಇದರ ಸ್ಕ್ರೀನ್ಶಾಟ್ ಶೇರ್ ಮಾಡಿದ ವ್ಯಕ್ತಿಯೊಬ್ಬರು, ಕೊನೆಗೂ unworried ಎಂಬ ಶಬ್ದಕ್ಕೆ ಸರಿಯಾದ ಅರ್ಥ ದೊರಕಿತು ಎಂದು ಶೀರ್ಷಿಕೆ ನೀಡಿದ್ದಾರೆ. ಈ ಸ್ಕ್ರೀನ್ಶಾಟ್ನ್ನು ಇದೀಗ ಸಾಮಾಜಿಕ ಜಾಲತಾಣಗಳ ಇತರೆ ವೇದಿಕೆಗಳಲ್ಲೂ ಶೇರ್ ಮಾಡಿಕೊಳ್ಳಲಾಗ್ತಿದೆ.