6 ಕೋಟಿ ರೂಪಾಯಿ ಲಾಟರಿ ಹಣವನ್ನ ಪ್ರಾಮಾಣಿಕವಾಗಿ ಫಲಾನುಭವಿಗೆ ನೀಡುವ ಮೂಲಕ ಕೇರಳದ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಯನ್ನ ಸಂಪಾದಿಸಿದ್ದಾರೆ. ಸ್ಮಿಜಾ ಕೆ. ಮೋಹನ್ ಎಂಬವರು ಜಾಕ್ಪಾಟ್ ಟಿಕೆಟ್ನ್ನು ಚಂದ್ರನ್ ಎಂಬವರಿಗೆ ಮಾರಾಟ ಮಾಡಿದ್ದರು.
ಆರ್ಥಿಕ ಸಂಕಷ್ಟವೇ ಹೆಚ್ಚಾಗಿರುವ ಈ ಕಠಿಣ ಸಂದರ್ಭದಲ್ಲಿ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಸ್ಮಿಜಾ, ಚಂದ್ರನ್ ಎಂಬವರಿಗೆ ಗೆಲುವಿನ ಟಿಕೆಟ್ನ್ನು ಪ್ರಾಮಾಣಿಕವಾಗಿ ಹಸ್ತಾಂತರಿಸಿದ್ದಾರೆ.
37 ವರ್ಷದ ಸ್ಮಿಜಾ ಬಳಿ ಮಾರಾಟವಾಗದ 12 ಟಿಕೆಟ್ಗಳಿದ್ದವು. ಹೀಗಾಗಿ ಸ್ಮಿಜಾ ಈ ಟಿಕೆಟ್ಗಳನ್ನ ವಾಟ್ಸಾಪ್ ಗ್ರೂಪ್ನಲ್ಲಿ ಶೇರ್ ಮಾಡಿದ್ದರು. ಆದರೆ ಯಾರೂ ಕೂಡ ಟಿಕೆಟ್ ಕೊಳ್ಳಲು ತಯಾರಿರಲಿಲ್ಲ.
ಇದಾದ ಬಳಿಕ ಸ್ಮಿಜಾ, ಚಂದ್ರನ್ರನ್ನ ಸಂಪರ್ಕಿಸಿದ್ದಾರೆ. ಅವರು ಟಿಕೆಟ್ ಫೋಟೋಗಳನ್ನ ಕಳಿಸುವಂತೆ ಹೇಳಿ ಬಳಿಕ ತಮ್ಮಾಯ್ಕೆಯ ಸಂಖ್ಯೆಯನ್ನ ತಿಳಿಸಿದ್ದರು.
ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಸ್ಮಿಜಾ ಆ ಟಿಕೆಟ್ನ್ನು ಚಂದ್ರನ್ಗೆ ಪ್ರಾಮಾಣಿಕವಾಗಿ ಹಸ್ತಾಂತರಿಸಿದ್ದಾರೆ.
ನಾನು ಚಂದ್ರನ್ರಿಗೆ ಟಿಕೆಟ್ ಹಸ್ತಾಂತರ ಮಾಡಿದ ಬಳಿಕ ಸಾಕಷ್ಟು ಮಂದಿ ನನ್ನ ಪ್ರಾಮಾಣಿಕತೆಯನ್ನ ಹಾಡಿ ಹೊಗಳಿದ್ದಾರೆ. ಉದ್ಯಮದಲ್ಲಿ ಇವೆಲ್ಲ ಸಹಜ. ಗ್ರಾಹಕರು ತಾವು ಕಷ್ಟಪಟ್ಟು ದುಡಿದ ಹಣದಲ್ಲಿ ಟಿಕೆಟ್ ಖರೀದಿ ಮಾಡುತ್ತಾರೆ. ಅಂದಮೇಲೆ ಅವರ ಜೊತೆ ಪ್ರಾಮಾಣಿಕವಾಗಿ ವರ್ತಿಸೋದು ನಮ್ಮ ಕರ್ತವ್ಯ ಎಂದು ಸ್ಮಿಜಾ ಹೇಳಿದ್ದಾರೆ.