ಈ ಕಾರಣಕ್ಕೆ ವೈರಲ್ ಆಯ್ತು ರಿಷಬ್ ಪಂತ್ ಧರಿಸಿದ ಟೀ ಶರ್ಟ್ 26-03-2021 11:02AM IST / No Comments / Posted In: Latest News, Sports ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ ಲಿವರ್ಪೂಲ್ ಫುಟಬಾಲ್ ಕ್ಲಬ್ನ ಅಭಿಮಾನಿಯಾಗಿದ್ದಾರೆಯೇ..? ಇಂತಹದ್ದೊಂದು ಪ್ರಶ್ನೆ ರಿಷಬ್ ಪಂತ್ರ ಟ್ವಿಟರ್ ಪೋಸ್ಟ್ ಒಂದನ್ನ ನೋಡಿದ ಬಳಿಕ ಹುಟ್ಟಿಕೊಂಡಿದೆ. ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿಜಯದ ನಗೆ ಬೀರಿದ ಬಳಿಕ ಭಾರತೀಯ ಆಟಗಾರರು ಫುಲ್ ಚಿಲ್ಲಿಂಗ್ ಮೂಡ್ಗೆ ಜಾರಿದ್ದಾರೆ. ಟೀಂ ಇಂಡಿಯಾ ಆಟಗಾರರು ಗೆಲುವನ್ನ ಸಂಭ್ರಮಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗ್ತಿದೆ. ರಿಷಬ್ ಪಂತ್ ಕೂಡ ಈ ಸೆಲೆಬ್ರೇಷನ್ನ ಫೋಟೋಗಳನ್ನ ಶೇರ್ ಮಾಡಿದ್ದು ಇದರಲ್ಲಿ ಅವರು ಕೆಂಪು ಬಣ್ಣದ ಲಿವರ್ಪೂಲ್ ಫುಟ್ಬಾಲ್ ಕ್ಲಬ್ನ ಟೀ ಶರ್ಟ್ ಧರಿಸಿದ್ದಾರೆ. ಈ ಫೋಟೋಗೆ ರಿಷಬ್ ಪಂತ್, ನಮ್ಮ ಟೀಂ ಒಟ್ಟಿಗೆ ಎಂಜಾಯ್ ಮಾಡುತ್ತೆ ಹಾಗೂ ಒಟ್ಟಿಗೆ ಗೆಲ್ಲುತ್ತೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋದಲ್ಲಿ ಪಂತ್ ಹಾಕಿದ ಲಿವರ್ಪೂಲ್ ಜೆರ್ಸಿ ಸದ್ಯ ಟಾಕ್ ಆಫ್ ದ ಟೌನ್ ಆಗಿದೆ. ಪಂತ್ರ ಈ ಪೋಸ್ಟ್ಗೆ ಲಿವರ್ಪೂಲ್ ಎಫ್ಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಪ್ರತಿಕ್ರಿಯೆ ನೀಡಿದೆ. ಅಲ್ಲದೇ ಅಭಿಮಾನಿಗಳು ಕೂಡ ತಮ್ಮದೇ ಆದ ರೀತಿಯಲ್ಲಿ ಪಂತ್ರ ಟೀ ಶರ್ಟ್ ಬಗ್ಗೆ ಮಾತನಾಡಿಕೊಳ್ತಿದ್ದಾರೆ. Siuuuuuuuu sign him as our Indian Ambassador guys. https://t.co/4q6si5YWpu — Swapan 🐳🇳🇴 (Slot Ka Parivaar) (@Swapan_Sarit) March 25, 2021 Saw this coming https://t.co/bHAaCMLd4y — Mohammed Faisal (@faisal337_) March 25, 2021 TIL that Rishabh Pant is a #lfc fan. YNWA 🙌🏽🙌🏽 https://t.co/EXUh7b8FbW — Ranajit Gopinath (@RanajitG) March 25, 2021 The team that enjoys together, wins together! Great to get together with the team for some fun in the sun. @BCCI pic.twitter.com/EFfOnc2ENw — Rishabh Pant (@RishabhPant17) March 24, 2021