alex Certify 5 ಕಿ.ಮೀ. ದೂರದ ವಿವಾಹ ಸಮಾರಂಭ ಸ್ಥಳಕ್ಕೆ ಹೆಲಿಕಾಪ್ಟರ್‌ ನಲ್ಲಿ ಬಂದ ಮದುಮಗಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

5 ಕಿ.ಮೀ. ದೂರದ ವಿವಾಹ ಸಮಾರಂಭ ಸ್ಥಳಕ್ಕೆ ಹೆಲಿಕಾಪ್ಟರ್‌ ನಲ್ಲಿ ಬಂದ ಮದುಮಗಳು….!

ಮದುವೆ ಸಮಾರಂಭದ ಸಿದ್ಧತೆಯ ದಿನಗಳೇ ಹಾಗೆ; ಸಡಗರ-ಸಂಭ್ರಮದಿಂದ ತುಂಬಿ ಮನೆಯಲ್ಲೆಲ್ಲಾ ಹೊಸ ಕಳೆ ಇರುತ್ತದೆ. ಆದರೆ ಆಸ್ಟ್ರೇಲಿಯಾದ ಈ ಜೋಡಿಯ ಮದುವೆಗೆ ಭಾರೀ ಮಳೆ ವಿಲನ್ ಆಗಿಬಿಟ್ಟಿದೆ.

ಭಾರೀ ಮಳೆಯ ಕಾರಣದಿಂದ ಉಂಟಾದ ಪ್ರವಾಹದ ಕಾರಣ ಕೇಟ್ ಫೋತರಿಂಗಮ್‌ಗೆ ವಿಂಗ್ಹಾಮ್‌ನಲ್ಲಿರುವ ಆಕೆಯ ಹೆತ್ತವರ ಮನೆಯಲ್ಲಿ ಲಾಕ್ ಆಗಬೇಕಾಗಿ ಬಂದಿತ್ತು. ಪಟ್ಟಣದಲ್ಲಿರುವ ಒಂದೇ ಒಂದು ಸೇತುವೆಯನ್ನು ಪ್ರವಾಹದ ನೀರು ಮುಳುಗಿಸಿಬಿಟ್ಟಿತ್ತು. ಹೀಗಾಗಿ ಮದುವೆ ಸಮಾರಂಭ ನಡೆಯಬೇಕಿದ್ದ ಜಾಗಕ್ಕೆ ಹೋಗಲು ದಾರಿ ಇಲ್ಲದೇ ಪರದಾಡುವಂತಾಯಿತು ಆಕೆಯ ಕುಟುಂಬಕ್ಕೆ.

ತನ್ನ ಭಾವೀ ಪತಿ ವೇಯ್ನ್ ಬೆಲ್ ಜೊತೆಗೆ ಅದೇ ದಿನ ಮಧ್ಯಾಹ್ನ ಮೂರು ಗಂಟೆಗೆ ರಿಂಗ್ ಬದಲಿಸುವ ಕಾರ್ಯಕ್ರಮ ಇತ್ತು ಕೇಟ್‌ಗೆ. ಇಂಥ ಸಂದರ್ಭದಲ್ಲಿ ಏನು ಮಾಡುವುದು ಎಂದು ಚಿಂತೆ ಹೆಚ್ಚಾದ ವೇಳೆ ಈ ಜೋಡಿಗೆ ಐಡಿಯಾ ಒಂದು ಹೊಳೆದಿದೆ. ತುರ್ತು ವಿಮಾನ ಸೇವೆಯ ಮೂಲಕ ಮದುವೆಯ ಜಾಗ ತಲುಪಲು ನಿರ್ಧರಿಸಲಾಯಿತು.

ಜಗತ್ತಿನ ಅತ್ಯಂತ ಹಿರಿಯ ಶಾರ್ಕ್ ನ ವಯಸ್ಸೆಷ್ಟು ಗೊತ್ತಾ…..?

ಕೇವಲ 5 ಕಿಮೀನಷ್ಟು ದೂರದಲ್ಲಿದ್ದ ಸಮಾರಂಭದ ಜಾಗವನ್ನು ಕೊನೆಗೂ ಹೆಲಿಕಾಪ್ಟರ್‌ ಸಹಾಯದಿಂದ 15 ನಿಮಿಷ ತಡವಾಗಿ ಸೇರಿದ್ದಾರೆ.

ತಮ್ಮ ಮದುವೆಯ ಚಿತ್ರವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಕೇಟ್ ಫೋದರಿಂಗ್ಹಾಮ್, ತಮ್ಮ ಜೀವನದುದ್ದಕ್ಕೂ ಸ್ಮರಿಸಬಲ್ಲ ಘಟನೆಯ ಅನುಭವವನ್ನು ಹಂಚಿಕೊಂಡಿದ್ದಾರೆ.

https://twitter.com/mishyloan/status/1373879727337840643?ref_src=twsrc%5Etfw%7Ctwcamp%5Etweetembed%7Ctwterm%5E1373879727337840643%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fa-story-to-tell-your-children-here-is-why-a-bride-in-australia-was-airlifted-to-her-wedding-7241486%2F

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...