
ದುಬೈನ ಹರಾಜೊಂದರಲ್ಲಿ $62 ದಶಲಕ್ಷಕ್ಕೆ(450 ಕೋಟಿ ರೂಪಾಯಿ) ಮಾರಾಟವಾದ ಕ್ಯಾನವಾಸ್ ಪೇಂಟಿಂಗ್ ಒಂದು ಜಗತ್ತಿನ ಅತ್ಯಂತ ದುಬಾರಿ ಕಲಾಚಿತ್ರಗಳಲ್ಲಿ ಒಂದಾಗಿದೆ.
ಈ ಚಿತ್ರ ಬಿಡಿಸಲು 6,300 ಲೀಟರ್ ಪೇಂಟ್ ಬಳಸಲಾಗಿದ್ದು, 17,000 ಚದರ ಅಡಿ ವಿಸ್ತೀರ್ಣದಲ್ಲಿ ಬಣ್ಣ ಬಳಿಯಲಾಗಿದೆ. ’ದಿ ಜರ್ನಿ ಆಫ್ ಹ್ಯುಮಾನಿಟಿ’ ಹೆಸರಿನ ಈ ಚಿತ್ರವು ಬ್ಯಾಸ್ಕೆಟ್‌ಬಾಲ್ ಆಟದ ನಾಲ್ಕು ಅಂಗಳಗಳಷ್ಟು ವಿಸ್ತಾರವಾಗಿದೆ.
ಬ್ರಿಟೀಷ್ ಕಲಾವಿದರಾದ ಸಚಾ ಜಾಫ್ರಿ ಈ ಬೃಹತ್ ಕಲಾಚಿತ್ರ ಬಿಡಿಸಿದ್ದಾರೆ. ಕೋವಿಡ್-19 ಸಾಂಕ್ರಮಿಕದಿಂದ ಬಳಲುತ್ತಿರುವ ಮಕ್ಕಳ ನೆರವಿಗೆ ನಿಧಿ ಸಂಗ್ರಹಿಸಲು ಈ ಕಲಾಚಿತ್ರ ರಚಿಸಲಾಗಿದೆ.
ʼಲಾಕ್ ಡೌನ್ʼ ಸಮಯದಲ್ಲಿ ರದ್ದಾದ ಟಿಕೆಟ್ಗಳ ಮರುಪಾವತಿ ಕುರಿತು ʼಇಂಡಿಗೋʼದಿಂದ ಮಹತ್ವದ ಹೇಳಿಕೆ
ಈ ಚಿತ್ರವನ್ನು 70 ಫ್ರೇಮ್‌ಗಳಿಗೆ ಭಾಗ ಮಾಡಿದ್ದ ಕಲಾವಿದರು, ಮೊದಲಿಗೆ ಒಂದೊಂದು ಪ್ಯಾನೆಲ್ ಅನ್ನೂ ಪ್ರತ್ಯೇಕವಾಗಿ ಮಾರಾಟ ಮಾಡುವ ಮೂಲಕ $30 ದಶಲಕ್ಷ ಡಾಲರ್ ಸಂಗ್ರಹಿಸುವ ಇರಾದೆ ಹೊಂದಿದ್ದರು. ಆದರೆ, ದುಬೈನಲ್ಲಿ ನಡೆದ ಹರಾಜಿನಲ್ಲಿ ಆಂಡ್ರೆ ಅಬ್ಡೌನೆ ಹೆಸರಿನ ಉದ್ಯಮಿಯೊಬ್ಬರು ಈ ಬೃಹತ್ ಮೊತ್ತ ತೆತ್ತು ಕಲಾಚಿತ್ರವನ್ನು ಖರೀದಿಸಿದ್ದಾರೆ.
“ಬಡ ಕುಟುಂಬದಿಂದ ಬಂದ ನನಗೆ ತಿನ್ನಲು ಏನೂ ಸಿಗದೇ ಇದ್ದಾಗ ಹೇಗನಿಸುತ್ತದೆ ಎಂದು ಗೊತ್ತು. ಆದರೆ ನನಗೆ ಕಡೇ ಪಕ್ಷ ಪ್ರೀತಿ ಮಾಡಲು, ಶಾಲೆಗೆ ಕಳುಹಿಸಲು ಹಾಗೂ ಬೆಂಬಲ ಕೊಡಲು ಅಪ್ಪ-ಅಮ್ಮನಾದರೂ ಇದ್ದರು” ಎಂದು ಕ್ರಿಪ್ಟೋ-ಕರೆನ್ಸಿ ಉದ್ಯಮ ನಡೆಸುವ ಅಬ್ಡೌನೆ ತಿಳಿಸಿದ್ದಾರೆ.