ಒದ್ದೆಯಾದ ನೆಲದ ಮೇಲೆ ನಡೆದಾಡುವಾಗ ಎಷ್ಟು ಹುಷಾರಾಗಿ ಇದ್ರುನೂ ಕಡಿಮೆಯೇ. ಆದರೆ ಎಷ್ಟೇ ಜಾಗರೂಕತೆ ವಹಿಸಿದ್ರೂ ಕೆಲವೊಮ್ಮೆ ಪರಿಸ್ಥಿತಿ ನಮ್ಮ ಕೈಲಿ ಇರೋದಿಲ್ಲ. ಅಂದಹಾಗೆ ನಾವು ಇದನ್ನೆಲ್ಲ ಹೇಳೋಕೆ ಕಾರಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋ.
ವಿಡಿಯೋದಲ್ಲಿ ಮಹಿಳೆಯೊಬ್ಬರು ಮುಂದೆ ನಡೆದುಕೊಂಡು ಹೋಗ್ತಿದ್ದಾರೆ. ಆಕೆಯ ಹಿಂದೆಯೇ ಒಬ್ಬ ವ್ಯಕ್ತಿ ನಡೆದುಕೊಂಡು ಹೋಗ್ತಿದ್ದಾನೆ. ನಡೆದುಕೊಂಡು ಬರ್ತಿದ್ದ ವೇಳೆ ಆತನ ಕೈಲಿದ್ದ ಪ್ಯಾಕೇಟ್ನಿಂದ ಹಾಲಿನ ರೀತಿಯ ದ್ರವ ಕೆಳಕ್ಕೆ ಬಿದ್ದಿದೆ.
ಅಚಾನಕ್ ಆಗಿ ಆತ ಆ ದ್ರವದ ಮೇಲೆಯೇ ಕಾಲಿಟ್ಟಿದ್ದು ಜಾರಿ ಬಿದ್ದಿದ್ದಾನೆ. ಆತ ಬಿದ್ದ ರೀತಿಯನ್ನ ನೋಡ್ತಿದ್ರೆ ಆತನ ತಲೆಗೆ ಪೆಟ್ಟಾಗಿರಬಹುದು ಎಂದೆನಿಸುತ್ತಿದೆ. ಆದರೆ ವ್ಯಕ್ತಿ ಮಾತ್ರ ಪಟ್ ಎಂದು ಎದ್ದು ನಿಂತಿದ್ದಾನೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಟ್ವೀಟಿಗರು ತಮ್ಮದೇ ಆದ ರೀತಿಯಲ್ಲಿ ಶೀರ್ಷಿಕೆ ನೀಡುತ್ತಿದ್ದಾರೆ.
https://twitter.com/i/status/1374389275651842056
https://twitter.com/EngineringVids/status/1374389275651842056