alex Certify ಮೊಬೈಲ್ ಕಳವು ಮಾಡಿದ್ದಲ್ಲದೆ ಮಾಲೀಕರಿಗೆ ‘ಪಾಸ್ವರ್ಡ್’ ಕೇಳಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಕಳವು ಮಾಡಿದ್ದಲ್ಲದೆ ಮಾಲೀಕರಿಗೆ ‘ಪಾಸ್ವರ್ಡ್’ ಕೇಳಿದ ಭೂಪ…!

ಬೆಳಗಾವಿ: ಐನಾತಿ ಕಳ್ಳನೊಬ್ಬ ಮೊಬೈಲ್ ಕಳವು ಮಾಡಿದ್ದಲ್ಲದೆ ಅದನ್ನು ಓಪನ್ ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ ಮೊಬೈಲ್ ಮಾಲೀಕರಿಗೆ ಪಾಸ್ವರ್ಡ್ ಕೇಳಿದ ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯ ಹಿರೇಬಾಗೆವಾಡಿಯಲ್ಲಿ ನಡೆದಿದೆ.

ಹಿರೇಬಾಗೇವಾಡಿ ಬಸವನಗರದ ನಾಗನಗೌಡ ಪಾಟೀಲ್ ಎಂಬವರ ಮನೆಗೆ ನುಗ್ಗಿದ ಕಳ್ಳ ಸುಮಾರು 15 ಸಾವಿರ ರೂ. ಮೌಲ್ಯದ ಮೊಬೈಲ್ ಕಳ್ಳತನ ಮಾಡಿದ್ದಾನೆ.

ಕಾರಿನ ಡ್ಯಾಶ್‌ ಕ್ಯಾಮ್‌ ನಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಮೊಬೈಲ್ ಕಳುವಾಗಿರುವುದು ಅರಿವಿಗೆ ಬರುತ್ತಿದ್ದಂತೆ ನಾಗನಗೌಡ ಪಾಟೀಲ್ ಮತ್ತೊಂದು ಮೊಬೈಲ್ನಿಂದ ತಮ್ಮ ಮೊಬೈಲ್ ಗೆ ಕರೆ ಮಾಡಿದ್ದಾರೆ. ಅಷ್ಟರಲ್ಲಾಗಲೇ ಪಾಸ್ವರ್ಡ್ ಇಲ್ಲದೆ ಮೊಬೈಲ್ ಅನ್ಲಾಕ್ ಮಾಡಲು ಸಾಧ್ಯವಾಗದ ಕಳ್ಳ ಹತಾಶನಾಗಿದ್ದ ಎನ್ನಲಾಗಿದೆ.

ನಾಗನಗೌಡ ಪಾಟೀಲ್ ಅವರಿಂದ ಕರೆ ಬರುತ್ತಿದ್ದಂತೆ ಅದನ್ನು ಕಳ್ಳ ಸ್ವೀಕರಿಸಿದ್ದು, ಪಾಸ್ವರ್ಡ್ ಕೊಡಿ ಎಂದು ಗದರಿಸಿದ್ದಾನೆ. ಇದೀಗ ನಾಗನಗೌಡ ಪಾಟೀಲ್ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...