ಟಿಕ್ಟಾಕ್ನಲ್ಲಿ ದಿನಕ್ಕೆ ಅನೇಕ ವಿಡಿಯೋಗಳು ಎಷ್ಟರಮಟ್ಟಿಗೆ ವೈರಲ್ ಆಗುತ್ತೆ ಅಂದರೆ ಸಾಮಾಜಿಕ ಜಾಲತಾಣದ ಇತರೆ ವೇದಿಕೆಗಳಲ್ಲೂ ಟ್ರೆಂಡ್ ಕ್ರಿಯೇಟ್ ಮಾಡುತ್ತೆ. ಇಂತಹದ್ದೇ ಒಂದು ವೈರಲ್ ವಿಡಿಯೋದಲ್ಲಿ ಯುವತಿಯೊಬ್ಬಳು ದೀರ್ಘ ಸಮಯದ ಹಿಂದೆ ಕಳೆದು ಹೋಗಿದ್ದ ತನ್ನ ಅವಳಿ ಸಹೋದರಿಯನ್ನ ವಿಶ್ವ ವಿದ್ಯಾಲಯದಲ್ಲಿ ಕಂಡುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಟಿಕ್ಟಾಕ್ ಬಳಕೆದಾರಳಾದ ಏಮಿ ಹ್ಯಾರಿಯಟ್ ಎಂಬಾಕೆ ಈ ರೀತಿಯಾದ ವಿಡಿಯೋ ಶೇರ್ ಮಾಡಿದ್ದಾಳೆ.
ನನಗನಿಸುವ ಪ್ರಕಾರ ನಾನು ದೀರ್ಘಕಾಲದ ಹಿಂದೆ ಕಳೆದುಕೊಂಡಿದ್ದ ಅವಳಿ ಸಹೋದರಿಯನ್ನ ವಿಶ್ವವಿದ್ಯಾಲಯದಲ್ಲಿ ಕಂಡುಕೊಂಡಿದ್ದೇನೆ ಎಂದು ಎನಿಸುತ್ತಿದೆ. ನಾವಿಬ್ಬರು ನೋಡೋಕೆ ಒಂದೇ ತರಹ ಇದ್ದೇವೆ ಎಂದು ಹೇಳುವ ಮೂಲಕ ಆಕೆಯ ಫೋಟೋವನ್ನ ಶೇರ್ ಮಾಡಿದ್ದಾಳೆ.
ಇನ್ನೊಂದು ವಿಚಿತ್ರ ವಿಚಾರ ಅಂದ್ರೆ ಇವರಿಬ್ಬರ ಹುಟ್ಟಿದ ದಿನಾಂಕ ಕೂಡ ಒಂದು ದಿನ ಹಿಂದೆ ಮುಂದೆ ಇದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಈ ಯುವತಿ ಇನ್ನೂ ಯಾವುದೇ ಡಿಎನ್ಎ ಪರೀಕ್ಷೆಗೆ ಒಳಗಾಗದ ಕಾರಣ ಈ ವಿಚಾರದ ಅಸಲಿಯತ್ತು ಇನ್ನೂ ಗೊಂದಲಮಯವಾಗಿಯೇ ಇದೆ.