ವಾಹನಗಳನ್ನ ಕೊಂಡ ಬಳಿಕ ಅದರ ಲುಕ್ನ್ನು ಬದಲಾವಣೆ ಮಾಡಿ ವಾಹನಕ್ಕೆ ಹೊಸದೊಂದು ರೂಪ ನೀಡುವ ವಿಧಾನ ಹಲವಾರು ವರ್ಷಗಳಿಂದ ಟ್ರೆಂಡ್ನಲ್ಲಿದೆ. ಇಂತಹ ಹಲವು ಅನ್ವೇಷಣೆಗಳಿಗೆ ಈಗಾಗಲೇ ಟಿಕ್ಟಾಕ್, ಇನ್ಸ್ಟಾಗ್ರಾಂ, ಫೇಸ್ಬುಕ್ ಹಾಗೂ ಟ್ವಿಟರ್ಗಳು ಸಾಕ್ಷಿಯಾಗಿವೆ.
ಇದೇ ರೀತಿಯ ಒಂದು ಪ್ರಯತ್ನದಲ್ಲಿ ಕೈಲೆ ಷೀಲೆ ಎಂಬವರು ತಮ್ಮ ಹೊಸ ಅನ್ವೇಷಣೆಯ ಮೂಲಕ ಟಿಕ್ಟಾಕ್ನಲ್ಲಿ ಮಿಲಿಯನ್ಗಟ್ಟಲೇ ಜನರ ಮನಸ್ಸನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಅಬ್ಬಬ್ಬಾ…! ಒಂದು ಗೊನೆ ಬಾಳೆಹಣ್ಣಿಗೆ ಒಂದೂವರೆ ಲಕ್ಷ ಪಾವತಿಸಿದ ಮಹಿಳೆ..!
ಒಂದಿನ ಕೈಲೆ ಒಂದು ಸಾಮಾನ್ಯ ಬೈಸಿಕಲ್ ಮಾರಾಟಕ್ಕಿರೋದನ್ನ ನೋಡಿದ್ರು. ಇದನ್ನ ಖರೀದಿ ಮಾಡಿದ ಕೈಲೆ ಅದಕ್ಕೊಂಡು ಹೊಸ ರೂಪವನ್ನ ನೀಡೋಕೆ ನಿರ್ಧರಿಸಿದ್ರು. ಅದರಂತೆ ಬೈಸಿಕಲ್ ಸೀಟ್ನ್ನ ತೆಗದು ಆ ಜಾಗದಲ್ಲಿ ಕುದುರೆಯ ಮೈ ಭಾಗದ ರೀತಿಯಲ್ಲಿ ಸೀಟ್ನ್ನ ವಿನ್ಯಾಸಗೊಳಿಸಿದ್ರು.
ಇದೀಗ ಈ ಬೈಸಿಕಲ್ನ್ನು ಕೈಲೆ ಚಲಾಯಿಸಿದ್ರೆ ಅದು ನೋಡೋಕೆ ಮನುಷ್ಯ ಮುಖದ ಕುದುರೆಯಂತೆ ಭಾಸವಾಗುತ್ತೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.