ಅಮೆರಿಕ ಬಾಲ್ಟಿಮೋರ್ ನಗರದಲ್ಲಿರುವ ಎಕಿಬೆನ್ ಎಂಬ ಹೆಸರಿನ ರೆಸ್ಟೋರೆಂಟ್ ಗ್ರಾಹಕರ ಆಸೆಯನ್ನ ವಿಶೇಷವಾಗಿ ಪೂರೈಸಿದ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನಗೆಲ್ಲುತ್ತಿದೆ.
ಸ್ಥಳೀಯ ನಿವಾಸಿಯೊಬ್ಬರು ಈ ರೆಸ್ಟೋರೆಂಟ್ ಮಾಲೀಕರ ಮಾನವೀಯ ಗುಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಶೇರ್ ಮಾಡಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಮಹಿಳೆಯ ಅಳಿಯನೊಬ್ಬ ಈ ರೆಸ್ಟೋರೆಂಟ್ಗೆ ಕರೆ ಮಾಡಿದ್ದರು. ನನ್ನ ಅತ್ತೆ ಬಾಲ್ಟಿಮೋರ್ಗೆ ಭೇಟಿ ನೀಡಿದ್ದಾಗೆಲ್ಲ ನಿಮ್ಮ ರೆಸ್ಟೋರೆಂಟ್ಗೆ ಭೇಟಿ ನೀಡಿ ತನ್ನಿಷ್ಟದ ಖಾದ್ಯಗಳನ್ನ ಸೇವಿಸುತ್ತಿದ್ದಳು ಎಂದು ಹೇಳಿಕೊಂಡಿದ್ದರು.
ಬೆಚ್ಚಿ ಬೀಳಿಸುವಂತಿದೆ ಚಿಕನ್ ಬೇಯಿಸುವ ವಿಧಾನ
ಆದರೆ ಆಕೆ ಈಗ ಕ್ಯಾನ್ಸರ್ನ ಕೊನೆಯ ಘಟ್ಟದಲ್ಲಿ ಇದ್ದಾಳೆ. ಸಾವಿನ ಕೊನೆಯ ಮೆಟ್ಟಿಲಿನಲ್ಲಿರುವ ಈಕೆ ತನ್ನ ಕೊನೆಯ ಆಸೆಯ ರೂಪದಲ್ಲಿ ಎಕಿಬೆನ್ನಿಂದ ತನ್ನಿಷ್ಟದ ಖಾದ್ಯ ಬೇಕು ಎಂದು ಮನವಿ ಮಾಡಿದ್ದಳು. ಹೀಗಾಗಿ ಮಹಿಳೆಯ ಕುಟುಂಬಸ್ಥರು ರೆಸ್ಟೋರೆಂಟ್ ನ್ನು ಸಂಪರ್ಕಿಸಿದ್ದರು.
ತಮ್ಮ ರೆಸ್ಟೋರೆಂಟ್ ನ ನೆಚ್ಚಿನ ಗ್ರಾಹಕಿಯ ಈ ಕೊನೆ ಆಸೆಯನ್ನ ಪೂರೈಸುವ ಸಲುವಾಗಿ ಬರೋಬ್ಬರಿ 6 ಕಿಲೋಮೀಟರ್ ಪ್ರಯಾಣ ಮಾಡಿ ಆಕೆಯ ಇಷ್ಟದ ಖಾದ್ಯವನ್ನ ತಲುಪಿಸುವಲ್ಲಿ ರೆಸ್ಟೋರೆಂಟ್ ಮಾಲೀಕರು ಯಶಸ್ವಿಯಾಗಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.