ಫುಡ್ ಡೆಲಿವರಿ ಬಾಯ್ ಹಾಗೂ ಗ್ರಾಹಕರ ನಡುವಿನ ಜಟಾಪಟಿಯ ವಿಚಾರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಲೇ ಇದೆ. ಇದೀಗ ಈ ಸಾಲಿನ ಇನ್ನೊಂದು ಉದಾಹರಣೆ ಎಂಬಂತೆ ಫಾಸ್ಟ್ ಫುಡ್ ಕಂಪನಿಯ ಡೆಲಿವರಿ ಬಾಯ್ ಮೇಲೆ ಯುವತಿಯರು ದಾಳಿ ನಡೆಸಿದ್ದು ಮಾತ್ರವಲ್ಲದೇ ಹಣವನ್ನೂ ದೋಚಿ ಪರಾರಿಯಾದ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ. ಇನ್ನೊಬ್ಬ ಗ್ರಾಹಕರು ಈ ವಿಡಿಯೋವನ್ನ ಚಿತ್ರೀಕರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ದಕ್ಷಿಣ ಫ್ಲೋರಿಡಾದ ಪೊಪೆಯೆ ಫಾಸ್ಟ್ಫುಡ್ನ ಸಿಬ್ಬಂದಿ ಮೇಲೆ ನಡೆದ ದಾಳಿಯನ್ನ ವಿಡಿಯೋದಲ್ಲಿ ನೋಡಬಹುದಾಗಿದೆ. ಮೊದಲು ಓರ್ವ ಯುವತಿ ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ನಡೆಯುತ್ತದೆ. ಬಳಿಕ ಇಬ್ಬರು ಯುವತಿಯರು ಕಾರಿನಿಂದಿಳಿದು ಬಂದು ಆತನ ಮೇಲೆ ದಾಳಿ ನಡೆಸುತ್ತಾರೆ. ಕಾರಿನೊಳಗಿದ್ದ ಇನ್ನೊಬ್ಬ ಯುವತಿ ಆತನ ಬಳಿಯಿದ್ದ ಹಣವನ್ನ ದೋಚುತ್ತಾಳೆ. ಹಾಗೂ ಕದ್ದ ಹಣದ ಸಮೇತ ಪರಾರಿಯಾಗಿದ್ದಾರೆ.
https://www.facebook.com/palmbeachcountysheriff/videos/207715661143642/?t=4