ಆನ್ಲೈನ್ ಗೇಮ್ ಒಂದರ ಹೆಚ್ಚುವರಿ ಫೀಚರ್ಗಳನ್ನು ಖರೀದಿಸಲು ಸ್ನೇಹಿತನೊಬ್ಬನಿಂದ 75,000 ರೂ ಸಾಲ ಪಡೆದಿದ್ದ 17 ವರ್ಷದ ಟೀನೇಜರ್ ಒಬ್ಬ, ಸಾಲ ಮರುಪಾವತಿ ಮಾಡಲಾಗದ ಕಾರಣಕ್ಕೆ ಕೊಲೆಯಾಗಿದ್ದಾನೆ.
ಛತ್ತೀಸ್ಘಡದ ರಾಯ್ಪುರದಲ್ಲಿ ಈ ಘಟನೆ ಜರುಗಿದ್ದು, ಕಾಣೆಯಾಗಿ ಐದು ದಿನಗಳ ಬಳಿಕ, ಮಾರ್ಚ್ 10ರಂದು, ಇಲ್ಲಿನ ರಾಯ್ಘಡದ ಸರಣ್ಡಘಡದಲ್ಲಿ ಹುಡುಗನ ಶವ ಕಂಡುಬಂದಿದೆ.
ಗೇಮೀಂಗ್ಗೆ ವಿಪರೀತ ಅಡಿಕ್ಟ್ ಆಗಿದ್ದ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತ ಚವಾಣ್ ಕುಂಟೆಯಿಂದ ಕಳೆದ ವರ್ಷ 75,000 ರೂ. ಸಾಲ ಪಡೆದಿದ್ದ. ಈ ದುಡ್ಡಿನಿಂದ ಗೇಮ್ನ ಹೆಚ್ಚುವರಿ ಫೀಚರ್ಗಳನ್ನು ಆ ಬಾಲಕ ಖರೀದಿಸಿದ್ದ.
IPS ಅಧಿಕಾರಿ ಹೇಮಂತ್ ನಿಂಬಾಳ್ಕರ್ ಗೆ ಬಿಗ್ ರಿಲೀಫ್
ಸಾಲ ಕೊಟ್ಟು ವರ್ಷವಾದ ಕಾರಣ ಕೊಟ್ಟ ದುಡ್ಡನ್ನ ವಾಪಸ್ ಕೇಳಲು ಆರಂಭಿಸಿದ ಕುಂಟೆಗೆ, ಪ್ರತಿ ಬಾರಿಯೂ ಆಮೇಲೆ ಪಾವತಿ ಮಾಡುವುದಾಗಿ ಸಂತ್ರಸ್ತ ಹೇಳುತ್ತಲೇ ಕಾಲ ತಳ್ಳಿಕೊಂಡು ಬಂದಿದ್ದ. ಆದರೆ ಯಾಕೋ ತನ್ನ ದುಡ್ಡನ್ನು ವಾಪಸ್ ಕೊಡುವ ಆಲೋಚನೆ ಸಾಲಗಾರನಿಗೆ ಇಲ್ಲ ಎಂದು ಅರಿತ ಚವಾಣ್, ಸಾಲಗಾರನೊಂದಿಗೆ ಜಗಳವಾಡಿದ್ದಾನೆ. ಸಂತ್ರಸ್ತನಿಗೆ ಚೆನ್ನಾಗಿ ಕುಡಿಸಿ ದುಡ್ಡು ಕೇಳಿದ ಚವಾಣ್ಗೆ ಮತ್ತದೇ ’ಕೊಡೋಣ ಆಮೇಲೆ’ ಎಂಬ ಉತ್ತರ ಕೇಳಿ ಸಿಟ್ಟು ನೆತ್ತಿಗೇರಿ, ಆತನ ಕತ್ತನ್ನೇ ಸೀಳಿದ್ದಾನೆ.
ಘಟನೆಗೆ ಅಪಹರಣದ ತಿರುವು ಕೊಟ್ಟು ಸಂತ್ರಸ್ತನ ತಾಯಿಯಿಂದ ಐದು ಲಕ್ಷ ರೂ ಕೀಳಲು ನೋಡಿದ್ದಾನೆ ಚವಾಣ್. ಆದರೆ ಸಂತ್ರಸ್ತನ ತಾಯಿ ಪೊಲೀಸರ ಮೊರೆ ಹೋಗಿದ್ದು, ಅಕ್ಕಪಕ್ಕದ ಏರಿಯಾಗಳ ಸಿಸಿಟಿವಿ ಫುಟೇಜ್ ನೋಡಿದ ಬಳಿಕ ಏನಾಗಿದೆ ಎಂದು ತಿಳಿದು ಬಂದಿದೆ.