alex Certify ಈ ಕಾರಣಕ್ಕೆ ವೈರಲ್​ ಆಯ್ತು ವಿಮಾನಯಾನ ಇಲಾಖೆ ಅಧಿಕಾರಿ ಪೋಸ್ಟ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ವೈರಲ್​ ಆಯ್ತು ವಿಮಾನಯಾನ ಇಲಾಖೆ ಅಧಿಕಾರಿ ಪೋಸ್ಟ್…..!

ಕೋವಿಡ್​ ಮಾರ್ಗಸೂಚಿ ಇರಲಿ ಬಿಡಲಿ, ವಿಮಾನ ನಿಲ್ದಾಣದಿಂದ ಹೊರ ಬರೋದು ಹಾಗೂ ಒಳ ಹೋಗುವ ಕೆಲಸ ಸುಲಭವಂತೂ ಅಲ್ಲ. ನೀವು ವಿಮಾನದಿಂದ ಸರಿಯಾದ ಸಮಯಕ್ಕೆ ಇಳಿದ್ರೂ ಸಹ ಲಗೇಜ್​ ಸಂಗ್ರಹ ಮಾಡೋದು ಸೇರಿದಂತೆ ವಿವಿಧ ಕೆಲಸಗಳನ್ನ ಮಾಡೋದೇ ಸಮಯ ತೆಗೆದುಕೊಳ್ಳುತ್ತೆ. ಇದು ವಿಮಾನ ನಿಲ್ದಾಣದಲ್ಲಿ ಹೊರಗೆ ಕಾಯುತ್ತಿರುವವರ ತಾಳ್ಮೆಯನ್ನ ಪರೀಕ್ಷಿಸುವಂತೆ ಮಾಡಬಹುದು. ಇಂತಹದ್ದೇ ಒಂದು ಘಟನೆಗೆ ವಿಮಾನಯಾನ ತಜ್ಞ ಸಂಜೀವ್​ ಕಪೂರ್​ ಸಾಕ್ಷಿಯಾಗಿದ್ದಾರೆ.

ವಿಮಾನಯಾನ ತಜ್ಞ ಸಂಜೀವ್​ ಕಪೂರ್​ ತಮ್ಮ ಪತ್ನಿಯ ಜೊತೆ ನಡೆಸಿದ ವಾಟ್ಸಾಪ್​ ಚಾಟ್​ನ ಸ್ಕ್ರೀನ್​ಶಾಟ್​ ಒಂದನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.
ಪತ್ನಿಯ ಬಳಿ ಸಂಜೀವ್​, ವಿಮಾನ ಸರಿಯಾದ ಸಮಯಕ್ಕೆ ಲ್ಯಾಂಡ್ ಆಗಲಿದೆ. ಮಧ್ಯಾಹ್ನ 12ಗಂಟೆಗೆ ಸರಿಯಾಗಿ ಕಾರನ್ನ ಕಳುಹಿಸು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಪತ್ನಿ ಒಕೆ ಎಂದಿದ್ದಾರೆ. ಕೂಡಲೇ ನಾನು ಕಾರಿನಲ್ಲೇ ಇರುತ್ತೇನೆ. ಹೀಗಾಗಿ ನೀವು ಸರಿಯಾದ ಸಮಯಕ್ಕೆ ಬನ್ನಿ ಎಂದಿದ್ದಾರೆ. ಇದಕ್ಕೆ ಸಂಜೀವ್​, ನೀನು ಕೂಡ ಕಾರಿನಲ್ಲಿ ಇರ್ತೀಯಾ ಎಂಬ ವಿಚಾರವನ್ನ ಪೈಲೆಟ್​ಗೆ ತಿಳಿಸುತ್ತೇನೆ ಎಂದು ಮೆಸೇಜ್​ ಮಾಡಿದ್ದಾರೆ.

ವಿಮಾನಯಾನ ಇಲಾಖೆಯಲ್ಲಿ 20 ವರ್ಷಗಳ ಅನುಭವ ಹೊಂದಿರುವ ನಿವೃತ್ತ ಸಿಸಿಒ ವಿಸ್ತಾರಾ ಇದಕ್ಕೆ ಉತ್ತರ ನೀಡಿದ್ದು ನಾನು ಈ ವಿಚಾರವನ್ನ ಪೈಲಟ್​​ಗೆ ತಿಳಿಸುತ್ತೇನೆ ಎಂದು ಬರೆದಿದ್ದಾರೆ.

ಇದಾದ ಬಳಿಕ ಇನ್ನೊಂದು ಟ್ವೀಟ್​ ಶೇರ್​ ಮಾಡಿರುವ ಸಂಜೀವ್​, ನಾನು ಹೇಳಿದ್ದಕ್ಕಿಂತ ಹೆಚ್ಚು ಸಮಯವನ್ನ ತೆಗೆದುಕೊಂಡೆ. ಇದು ನನ್ನ ಹೊಸ ಮನೆಯೆಂದು ನಾಯಿ ಗೂಡಿನ ಫೋಟೋ ಶೇರ್​ ಮಾಡಿದ್ದಾರೆ. ಸಂಜೀವ್​ ಕಪೂರ್​​ರ ಈ ಟ್ವೀಟ್​ಗಳು ಸಖತ್​ ವೈರಲ್​ ಆಗಿವೆ.

— Sanjiv Kapoor (@TheSanjivKapoor) March 16, 2021

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...