ಕಬಿನಿ ಅಭಯಾರಣ್ಯದಿಂದ ಕಳೆದ ಒಂದು ವರ್ಷದಿಂದಲೂ ವನ್ಯಜೀವಿಗಳ ಸುಂದರ ಚಿತ್ರಗಳು ಬಹಳಷ್ಟು ಬರುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿಸುತ್ತಿವೆ.
ಇವುಗಳ ಪೈಕಿ ಕರಿ ಚಿರತೆಯ ಚಿತ್ರಗಳು ಬಲೇ ಫೇಮಸ್ಸಾಗಿಬಿಟ್ಟಿವೆ. ಛಾಯಾಗ್ರಾಹಕ ಶಾಜ್ ಜಂಗ್ ಈ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಜಂಗ್ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಈ ಚಿರತೆಯ ಚಿತ್ರಗಳನ್ನು ಶೇರ್ ಮಾಡಿದ್ದು, ಅದು ನೆಟ್ಟಿಗರಿಗೆ ಬಲೇ ಇಷ್ಟವಾಗಿಬಿಟ್ಟಿದೆ. ಈ ಕರಿ ಚಿರತೆಯನ್ನು ನೋಡಿ ದಿ ಜಂಗಲ್ ಬುಕ್ ಪಾತ್ರಧಾರಿ ’ಭಗೀರಾ’ನನ್ನು ನೆನೆಯುತ್ತಿದ್ದಾರೆ ನೆಟ್ಟಿಗರು.
ನಾಲ್ಕೈದು ವರ್ಷ ವಯಸ್ಸಿನ ಈ ಕರಿ ಚಿರತೆ ಭಾರೀ ಚೂಟಿಯಾಗಿದ್ದು, ಅದರ ಚಿತ್ರ ಸೆರೆ ಹಿಡಿಯಲು ಭಾರೀ ತಾಳ್ಮೆ ಬೇಕಾಯಿತೆಂದು ಛಾಯಾಗ್ರಾಹಕ ಜಂಗ್ ಹೇಳಿದ್ದಾರೆ.
ಎಟಿಎಂ ದರೋಡೆಗೆ ಯತ್ನ: ಸೈರನ್ ಸೌಂಡು ಕೇಳಿ ದಿಕ್ಕಾಪಾಲಾಗಿ ಓಡಿದ ಕಳ್ಳರು
ಇದೀಗ ಅದೇ ಅರಣ್ಯದಲ್ಲಿ ಸೆರೆ ಹಿಡಿದ ಮತ್ತೊಂದು ಚಿತ್ರ ವೈರಲ್ ಆಗಿದ್ದು, ಕರಿ ಚಿರತೆಯು ಮತ್ತೊಂದು ಚಿರತೆಯೊಂದಿಗೆ ಫ್ರೇಂನಲ್ಲಿ ಸೆರೆಯಾಗಿದೆ.
ಮರದ ಮೇಲೆ ಎರಡೂ ಚಿರತೆಗಳು ಇದ್ದು, ಇಬ್ಬರ ನಡುವೆ ಕಾಳಗ ಸಂಭವಿಸುವ ಸಾಧ್ಯತೆಯನ್ನು ಚಿತ್ರದಲ್ಲಿ ನೋಡಬಹುದಾಗಿದೆ.
ಇದೀಗ ಎರಡೂ ಚಿರತೆಗಳ ನಡುವಿನ ಘಟನೆಯ ವಿಡಿಯೋ ಒಂದು ವೈರಲ್ ಆಗಿದ್ದು, ಇನ್ಫೋಸಿಸ್ ಸಹ ಸ್ಥಾಪಕ ನಂದನ್ ನಿಲೇಕಣಿ ಇದನ್ನು ಶೇರ್ ಮಾಡಿಕೊಂಡಿದ್ದಾರೆ.