ಪ್ರತಿ ವರ್ಷವೂ ನದಿಗಳು ಹಾಗೂ ಸಮುದ್ರಗಳಲ್ಲಿ ಮಾಲಿನ್ಯದ ಮಟ್ಟ ಏರಿಕೆಯಾಗುತ್ತಲೇ ಇದೆ ಎಂಬುದು ಗೊತ್ತಿರದ ವಿಚಾರವೇನಲ್ಲ.
ಬ್ರಿಟನ್ ಒಂದರಲ್ಲೇ ಪ್ರತಿ ವರ್ಷವೂ ಎಂಟು ಶತಕೋಟಿಯಷ್ಟು ಪಾನೀಯದ ಕಂಟೇನರ್‌ಗಳನ್ನು ನದಿಗಳು, ಸಮುದ್ರ ಹಾಗೂ ಲಾಂಡ್‌ಫಿಲ್‌ನಲ್ಲಿ ಡಂಪ್ ಮಾಡಲಾಗುತ್ತಿದೆ ಎಂಬ ವರದಿಯೊಂದು ಸದ್ದು ಮಾಡಿದೆ. ಈ ಸಂಶೋಧನೆಯನ್ನು ಗ್ರೀನ್‌ಪೀಸ್, ಸಿಪಿಆರ್‌ಇ ಹಾಗೂ ರೀಲೂಪ್ ಎಂಬ ಪರಿಸರ ಸಂರಕ್ಷಣೆಯ ಸಂಘಟನೆಗಳು ನಡೆಸಿವೆ.
2019ರಲ್ಲಿ ಹೀಗೆ ಡಂಪ್ ಮಾಡಲಾದ ಕ್ಯಾನ್‌ಗಳ ಪೈಕಿ 40 ಪ್ರತಿಶತ ಪ್ಲಾಸ್ಟಿಕ್ ಬಾಟಲಿಗಳು, 33 ಪ್ರತಿಶತದಷ್ಟು ಕ್ಯಾನ್‌ಗಳು ಹಾಗೂ 18 ಪ್ರತಿಶತದಷ್ಟು ಗಾಜುಗಳದ್ದಾಗಿವೆ.
‘ಚಾರ್ಮಡಿ ಘಾಟ್’ ಮೂಲಕ ಸಂಚರಿಸುವ ಪ್ರಯಾಣಿಕರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ
ಪ್ರತಿವಷವೂ ಬ್ರಿಟನ್‌ನ ಪ್ರತಿಯೊಬ್ಬ ಸರಾಸರಿ ವ್ಯಕ್ತಿ 126 ಪಾನೀಯ ಕಂಟೇನರ್‌ಗಳನ್ನು ಬಿಸಾಡುತ್ತಾನೆ ಎಂದು ತಿಳಿದುಬಂದಿದೆ. ಇವುಗಳನ್ನು ಮರಳಿಸಿ ಡೆಪಾಸಿಟ್ ಮಾಡುವ ಯೋಜನೆಯೊಂದರ ಮೇಲೆ ಪರಿಸರ ಸಂಘಟನೆಗಳು ಅಭಿಯಾನಕ್ಕೆ ಚಾಲನೆ ನೀಡಲು ಪ್ರಯತ್ನಿಸುತ್ತಿವೆ. ಕಂಟೇನರ್‌ಗಳನ್ನು ಹಿಂದಿರುಗಿಸುವ ಮಂದಿಗೆ ನಗದಿನ ರೂಪದಲ್ಲಿ ಪ್ರೋತ್ಸಾಹಧನ ನೀಡುವ ಆಲೋಚನೆಯಲ್ಲಿವೆ.
ಈ ಬಗ್ಗೆ ಮಾತನಾಡಿದ ರೀಲೂಪ್‌ನ ಸಮಂತಾ ಹಾರ್ಡಿಂಗ್, ತ್ಯಾಜ್ಯದ ಸಮರ್ಪಕ ನಿರ್ವಹಣೆಗೆ ಶಾಸನ ಹಾಗೂ ನೀತಿಗಳನ್ನು ತರುವ ಮೂಲಕ ಬಳಕೆದಾರರಿಗೂ ಅನುಕೂಲವಾಗುವಂತೆ ಕಂಟೇನರ್‌ಗಳನ್ನು ತಂದು ಜಮಾ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.