ಭೋಪಾಲ್: ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ತೀವ್ರವಾಗಿ ಏರಿಕೆಯಾಗತೊಡಗಿದೆ. ಅಂತೆಯೇ ಮಧ್ಯಪ್ರದೇಶದಲ್ಲಿ ಕೂಡ ಸೋಂಕಿತರ ಸಂಖ್ಯೆ ತೀವ್ರ ಗತಿಯಲ್ಲಿ ಏರತೊಡಗಿದೆ.
ಈ ಕಾರಣದಿಂದಾಗಿ ಮಧ್ಯಪ್ರದೇಶದ ಭೋಪಾಲ್ ಮತ್ತು ಇಂದೋರ್ ನಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಮಾರ್ಚ್ 17 ರಿಂದ ಇಂದೋರ್ ಮತ್ತು ಭೋಪಾಲ್ ನಲ್ಲಿ ಜಾರಿಯಲ್ಲಿರುತ್ತದೆ. ಬುರ್ಹಾನ್ ಪುರ, ಜಬಲ್ಪುರ ಸೇರಿದಂತೆ ಎಂಟು ಮಹಾನಗರಗಳಲ್ಲಿ ರಾತ್ರಿ 10 ಗಂಟೆಗೆ ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಮಧ್ಯಪ್ರದೇಶ ಸರ್ಕಾರ ತಿಳಿಸಿದೆ.