alex Certify ಜಸ್ಟ್​ 2 ನಿಮಿಷ ಮುಂಚಿತವಾಗಿ ಕಛೇರಿಯಿಂದ ನಿರ್ಗಮಿಸಿದ ಸಿಬ್ಬಂದಿಗೆ ಸಿಕ್ತು ಶಾಕಿಂಗ್ ಶಿಕ್ಷೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಸ್ಟ್​ 2 ನಿಮಿಷ ಮುಂಚಿತವಾಗಿ ಕಛೇರಿಯಿಂದ ನಿರ್ಗಮಿಸಿದ ಸಿಬ್ಬಂದಿಗೆ ಸಿಕ್ತು ಶಾಕಿಂಗ್ ಶಿಕ್ಷೆ..!

8 ರಿಂದ 9 ಗಂಟೆಗಳ ಕಾಲ ಕಚೇರಿಯಲ್ಲಿ ಕೆಲಸ ಮಾಡೋ ಅನೇಕರು ಲಾಗೌಟ್​ ಸಮಯಕ್ಕಿಂತ ಕೆಲ ನಿಮಿಷಗಳ ಮುಂಚೆಯೇ ಆಫೀಸಿನಿಂದ ಹೊರಡೋ ಅಭ್ಯಾಸ ಇಟ್ಕೊಂಡಿರ್ತಾರೆ. ಇದು ಕಂಪನಿ ನಿಯಮಕ್ಕಿಂತ ವಿರುದ್ಧವಾಗಿದ್ದರೂ ಸಹ ಅಂತಹ ದೊಡ್ಡ ಅಪರಾಧ ಕೂಡ ಅಲ್ಲ.

ಆದರೆ ಜಪಾನ್​ ಸರ್ಕಾರಿ ಇಲಾಖೆಯಲ್ಲಿ ಈ ರೀತಿ ನಿಗದಿತ ಸಮಯಕ್ಕಿಂತ ಕೆಲವೇ ನಿಮಿಷಗಳ ಮುಂಚೆ ಆಫೀಸಿನಿಂದ ಹೊರ ನಡೆದ ಸಿಬ್ಬಂದಿ ಭಾರೀ ಬೆಲೆ ತೆತ್ತಿದ್ದಾರೆ.

ಚಿಬಾ ಪ್ರಿಫೆಕ್ಚರ್​​ ಫನಬಾಶಿ ಸಿಟಿ ಬೋರ್ಡ್ ಆಫ್​ ಎಜುಕೇಶನ್​​ ತನ್ನ ಹಲವಾರು ಸಿಬ್ಬಂದಿ ಕೇವಲ 2 ನಿಮಿಷ ಮುಂಚಿತವಾಗಿ ಕಚೇರಿ ತೊರೆದ ಹಿನ್ನೆಲೆ ಅವರ ವೇತನವನ್ನೇ ಕಡಿತಗೊಳಿಸಿದೆ.

ಈ ಬಗ್ಗೆ ಕ್ರಾಸ್​ ಚೆಕ್​ ಮಾಡಿದ ವೇಳೆ 316 ಬಾರಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹೊರಟ ಉದಾಹರಣೆಗಳು ಸಿಕ್ಕಿವೆ. ಅಲ್ಲದೇ ಬಹುತೇಕ ಸಿಬ್ಬಂದಿಯಂತೂ ನಿರ್ಗಮನದ ಸಮಯವನ್ನ ಸುಳ್ಳು ಸುಳ್ಳಾಗಿ ನಮೂದಿಸಿದ್ದಾರೆ.

ಇನ್ನು ಅಸಿಸ್ಟೆಂಟ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 59 ವರ್ಷದ ಸಿಬ್ಬಂದಿ ಉಳಿದ ಸಿಬ್ಬಂದಿಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹೊರಡಲು ಸಹಾಯ ಮಾಡಿದ್ದಾರೆ ಎಂಬ ಕಾರಣಕ್ಕೆ ಮೂರು ತಿಂಗಳುಗಳ ಕಾಲ ಕಂಪನಿ ಆಕೆಯ ವೇತನದ 10ನೆಯ 1 ಭಾಗವನ್ನ ಕಡಿತ ಮಾಡಿದೆ. ಈಕೆ ಬಸ್​​ ಮಿಸ್​ ಆಗುತ್ತೆ ಎಂಬ ಕಾರಣಕ್ಕೆ ಕಚೇರಿಯಿಂದ ಬೇಗ ನಿರ್ಗಮಿಸಿದ್ದು ಮಾತ್ರವಲ್ಲದೇ ಇತರೆ ಸಿಬ್ಬಂದಿಗೂ ಸಹಾಯ ಮಾಡಿದ್ದಳು ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...