ಸೆಕ್ಸ್ ಗೊಂಬೆಯನ್ನ ವಿವಾಹವಾಗಿ ಭಾರೀ ಸುದ್ದಿ ಮಾಡಿದ್ದ ಬಾಡಿ ಬಿಲ್ಡರ್ ಯುರಿ ಟೊಲೊಚ್ಕೋ ಇದೀಗ ಈ ವಿವಾಹವನ್ನ ಮುರಿದುಕೊಂಡಿರೋದಾಗಿ ಹೇಳಿದ್ದಾರೆ.
ಟೊಲೊಚ್ಕೋ ಕಳೆದ ವರ್ಷ ಮಾರ್ಗೋ ಎಂಬ ಹೆಸರಿನ ಸಿಲಿಕಾನ್ ಗೊಂಬೆಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಮದುವೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು.
ಕಳೆದ ವರ್ಷ ಮಾರ್ಚ್ ತಿಂಗಳಲ್ಲೇ ಮದುವೆಯಾಗಬೇಕಿದ್ದ ಈ ಜೋಡಿ ಕೊರೊನಾ ವೈರಸ್ ಕಾರಣದಿಂದಾಗಿ ನವೆಂಬರ್ ತಿಂಗಳಲ್ಲಿ ವಿವಾಹವಾಗಿತ್ತು. ಆದರೆ ಈ ವಿಶೇಷ ಜೋಡಿ ಇದೀಗ ವೈವಾಹಿಕ ಬಂಧನದಿಂದ ದೂರಾಗಿದೆ.
ಆದರೆ ಸಿಲಿಕಾನ್ ಗೊಂಬೆಯಾದ ಮಾರ್ಗೋ ಮುರಿದು ಹೋದ ಬಳಿಕ ದುರಸ್ತಿ ಕಾರ್ಯ ಮಾಡಬೇಕಾಗಿ ಬಂತು. ಇದೇ ಕಾರಣಕ್ಕೆ ಇವರಿಬ್ಬರ ನಡುವಿನ ಸಂಬಂಧ ಮುರಿಯಲು ಆರಂಭಿಸಿತು. ಅವಳು ರಿಪೇರಿ ಅಂಗಡಿಯಲ್ಲಿದ್ದ ಸಂದರ್ಭದಲ್ಲಿ ಟೊಲೊಚ್ಕೋ ಬೇರೆ ಗೊಂಬೆಗಳ ನಡುವೆ ಸಂಬಂಧ ಹೊಂದಿದ್ದ ವಿಚಾರವನ್ನ ಬಹಿರಂಗಪಡಿಸಿದ್ದ.
ಟಿವಿ ಹುಚ್ಚಿಗೆ ಅಡುಗೆ ಮಾಡದ ಅತ್ತೆ: ಕೋಪಗೊಂಡ ಸೊಸೆ ಮಾಡಿದ್ದೇನು….?
ಇದಾದ ಬಳಿಕ ಲೋಲಾ ಎಂಬ ಹೊಸ ಸೆಕ್ಸ್ ಡಾಲ್ ಜೊತೆ ಸಂಬಂಧ ಹೊಂದಿರುವ ಬಗ್ಗೆಯೂ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಶೇರ್ ಮಾಡಿದ್ದಾರೆ. ಇದರ ಜೊತೆಯಲ್ಲಿ ಮತ್ತೊಂದು ಗೊಂಬೆಯ ಫೋಟೋವನ್ನೂ ಶೇರ್ ಮಾಡಿರುವ ಈ ಬಾಡಿ ಬಿಲ್ಡರ್ ಇದಕ್ಕೊಂದು ಹೆಸರನ್ನ ನೀಡಿ ಎಂದು ಫಾಲೋವರ್ಸ್ ಬಳಿ ಕೇಳಿಕೊಂಡಿದ್ದಾರೆ.