
ಬಾಲಿವುಡ್ನ ಬ್ಯುಸಿಯೆಸ್ಟ್ ನಟ ಅಕ್ಷಯ್ ಕುಮಾರ್ ಈ ವರ್ಷ ಬರೋಬ್ಬರಿ 6 ಸಿನಿಮಾಗಳ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಸದ್ಯ ಬಾಲಿವುಡ್ನ ಈ ಖಿಲಾಡಿ ಮಾಲ್ಡೀವ್ಸ್ನಲ್ಲಿ ಕುಟುಂಬದ ಜೊತೆ ವೆಕೆಷನ್ ಮೂಡ್ನಲ್ಲಿದ್ದಾರೆ. ಮಾಲ್ಡೀವ್ಸ್ನಿಂದ ಹಿಂತಿರುಗಿದ ಬಳಿಕ ಬಚ್ಚನ್ ಪಾಂಡೆ ಸಿನಿಮಾ ಶೂಟಿಂಗ್ನಲ್ಲಿ ಅಕ್ಷಯ್ ಕುಮಾರ್ ನಿರತರಾಗಲಿದ್ದಾರೆ.
ಮೂಲಗಳ ಪ್ರಕಾರ ಬಚ್ಚನ್ ಪಾಂಡೆ ಸಿನಿಮಾ ಶೂಟಿಂಗ್ ಬಳಿಕ ಅಕ್ಷಯ್ ʼರಾಮ್ ಸೇತುʼ ಸಿನಿಮಾ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಅಕ್ಷಯ್ ಕುಮಾರ್, ನಿರ್ದೇಶಕ ಅಭಿಷೇಕ್ ಶರ್ಮಾ ಹಾಗೂ ಕ್ರಿಯೇಟಿವ್ ನಿರ್ಮಾಪಕ ಡಾ. ಚಂದ್ರಪ್ರಕಾಶ್ ದ್ವಿವೇದಿ ಮಾರ್ಚ್ 18ರಂದು ಸಿನಿಮಾದ ಮುಹೂರ್ತಕ್ಕಾಗಿ ಅಯೋಧ್ಯೆಗೆ ತೆರಳಲಿದ್ದಾರೆ. ರಾಮ ಜನ್ಮಭೂಮಿಯಲ್ಲಿ ಈ ಸಿನಿಮಾದ ಮುಹೂರ್ತ ನೆರವೇರಲಿದೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಆಲಿಯಾ ಭಟ್
ʼರಾಮ್ ಸೇತುʼ ಸಿನಿಮಾ ವಿಚಾರವಾಗಿ ಮಾತನಾಡಿದ ನಿರ್ದೇಶಕ ಅಭಿಷೇಕ್ ಶರ್ಮಾ, ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಪುರಾತತ್ವಶಾಸ್ತ್ರಜ್ಞರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ರು. ಈಗಾಗಲೇ ರಾಮ್ ಸೇತು ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಲುಕ್ನ್ನು ಚಿತ್ರತಂಡ ರಿವೀಲ್ ಮಾಡಿದೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ನುಶ್ರತ್ ಭರುಚ್ಚಾ ತೆರೆ ಹಂಚಿಕೊಳ್ಳಲಿದ್ದಾರೆ.
ಇನ್ನೊಂದೆಡೆ ಅಕ್ಷಯ್ ಕುಮಾರ್ರ ಬಹುನಿರೀಕ್ಷಿತ ಸಿನಿಮಾ ಸೂರ್ಯವಂಶಿ ಏಪ್ರಿಲ್ 30ರಂದು ತೆರೆಗಪ್ಪಳಿಸಲಿದೆ. ಈ ಸಂಬಂಧ ಟ್ವೀಟ್ ಮೂಲಕ ಅಕ್ಷಯ್ ಕುಮಾರ್ ಮಾಹಿತಿ ನೀಡಿದ್ದಾರೆ.