ಟೆಕ್ ದೈತ್ಯ ಗೂಗಲ್ ಸಂಸ್ಥೆ ಕೊನೆಗೂ ಗೂಗಲ್ ಮ್ಯಾಪ್ನಲ್ಲಿ ಬಹು ಬೇಡಿಕೆಯ ಬದಲಾವಣೆಯನ್ನ ತರಲು ಮುಂದಾಗಿದ್ದು, ಶೀಘ್ರದಲ್ಲೇ ಗೂಗಲ್ ಮ್ಯಾಪ್ನಲ್ಲಿ ಇನ್ನೂ ಗುರುತಿಸಿರದ ಹಾಗೂ ತಪ್ಪಾಗಿ ಗುರುತಿಸಲ್ಪಟ್ಟ ಸ್ಥಳಗಳನ್ನ ಬದಲಾವಣೆ ಮಾಡಬಹುದಾಗಿದೆ.
ಗೂಗಲ್ ಬ್ಲಾಗ್ ಪೋಸ್ಟ್ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು ಮುಂದಿನ ಕೆಲ ತಿಂಗಳಲ್ಲೇ ವಿಶ್ವದ 80 ದೇಶಗಳಲ್ಲಿ ಈ ಹೊಸ ಸೌಲಭ್ಯ ಸಿಗಲಿದೆ ಎಂದು ಹೇಳಿದೆ.
ಪ್ರಸ್ತುತ ಕಾಣೆಯಾದ ರಸ್ತೆಗಳನ್ನ ನೀವು ಗೂಗಲ್ ಮ್ಯಾಪ್ನಲ್ಲಿ ಸೇರಿಸಬೇಕೆಂದು ಪ್ರಯತ್ನಿಸಿದ್ರೆ, ಈ ಬಗ್ಗೆ ಪಿನ್ ಮಾಡಿ ರಸ್ತೆಯ ಬಗ್ಗೆ ಮಾಹಿತಿಯನ್ನ ಗೂಗಲ್ಗೆ ಸಲ್ಲಿಸಬಹುದಾಗಿದೆ.
ಆದರೆ ಹೊಸ ಟೂಲ್ನ ಸಹಾಯದಿಂದ ನಾಪತ್ತೆಯಾದ ರಸ್ತೆಗಳನ್ನ ಸೇರಿಸೋದ್ರ ಜೊತೆಗೆ ರಸ್ತೆಯ ದಿಕ್ಕುಗಳನ್ನ ಸರಿಪಡಿಸಲೂ ಆಗುವಂತೆ ಮಾಡಲು ಗೂಗಲ್ ಪ್ರಯತ್ನಿಸುತ್ತಿದೆ.