ಸ್ಪೈಸ್ ಜೆಟ್ ಗುರುವಾರ ತನ್ನ ಹೆಲ್ತ್ಕೇರ್ ಕಂಪನಿ ಸ್ಪೈಸ್ ಹೆಲ್ತ್ ಮೂಲಕ ಜನರಿಗಾಗಿ ಅತಿ ಕಡಿಮೆ ಬೆಲೆಯ ಅಂದರೆ ಕೇವಲ 499 ರೂಪಾಯಿಗೆ ಕೊರೊನಾ ಟೆಸ್ಟಿಂಗ್ ಸೇವೆಯನ್ನ ದೇಶದಲ್ಲಿ ನೀಡ್ತಿದೆ. ಇದರ ಜೊತೆಯಲ್ಲಿ ಸ್ಪೈಸ್ಜೆಟ್ ಪ್ರಯಾಣಿಕರಿಗೆ ಕೇವಲ 299 ರೂಪಾಯಿಗೆ ಕೋವಿಡ್ ಟೆಸ್ಟ್ ಮಾಡುವ ಆಫರ್ ನೀಡಿದೆ. ಇದರಿಂದಾಗಿ ಸ್ಪೈಸ್ಜೆಟ್ ಪ್ರಯಾಣಿಕರು 299 ರೂಪಾಯಿ ಮೌಲ್ಯದಲ್ಲಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬಹುದಾಗಿದೆ.
ಇಲ್ಲಿಯವರೆಗೆ ಸ್ಪೈಸ್ಹೆಲ್ತ್ ಕೊರೊನಾ ಪರೀಕ್ಷೆ ವಿಚಾರದಲ್ಲಿ ವಿಭಿನ್ನ ರಾಜ್ಯ ಸರ್ಕಾರ ಹಾಗೂ ಸರ್ಕಾರಿ ಆರೋಗ್ಯ ಇಲಾಖೆಯ ಜೊತೆ ಕೆಲಸ ಮಾಡಿದೆ. ಇದರ ಮೊಬೈಲ್ ಲ್ಯಾಬ್ಗೆ ಕೇಂದ್ರ ಸರ್ಕಾರದಿಂದ ಮಾನ್ಯತೆ ಕೂಡ ಸಿಕ್ಕಿದೆ.
ಕೊರೊನಾ ಲಸಿಕೆ ಹಾಕಿಸಿಕೊಂಡ ಸಿಎಂ ಯಡಿಯೂರಪ್ಪ
ಮೊದಲ ಹಂತವಾಗಿ ಸ್ಪೈಸ್ ಹೆಲ್ತ್ ಮುಂಬಯಿ ಹಾಗೂ ದೆಹಲಿಯ ಜನರಿಗಾಗಿ ಪರೀಕ್ಷಾಲಯಗಳನ್ನ ಆರಂಭಿಸಿದೆ. ಇಲ್ಲಿ ಗ್ರಾಹಕರು ಮನೆಯಿಂದಲೇ ಸ್ಯಾಂಪಲ್ಗಳನ್ನ ಸಂಗ್ರಹಿಸಿ ಪರೀಕ್ಷೆಗೆ ತಂದುಕೊಡಬಹುದಾಗಿದೆ. ಗ್ರಾಹಕರು www.spicehealth.comನ ಮೂಲಕ ಅಪಾಯಿಂಟ್ಮೆಂಟ್ ಬುಕ್ ಮಾಡಿ ಹತ್ತಿರದ ಸ್ಪೈಸ್ಹೆಲ್ತ್ ಮೊಬೈಲ್ ಲ್ಯಾಬ್ನಲ್ಲಿ ಪರೀಕ್ಷೆ ಮಾಡಬಹುದಾಗಿದೆ. ಇದೇ ರೀತಿ ಸ್ಪೈಸ್ಜೆಟ್ನ ಪ್ರಯಾಣಿಕರು ತಮ್ಮ ಪಿಎನ್ಆರ್ ಸಂಖ್ಯೆಯನ್ನ ಉಲ್ಲೇಖಿಸಿ ವೆಬ್ಸೈಟ್ನಲ್ಲಿ ಆರ್ಟಿ – ಪಿಸಿಆರ್ ಪರೀಕ್ಷೆಗೆ ಬುಕ್ಕಿಂಗ್ ಮಾಡಬಹುದಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಸ್ಪೈಸ್ ಹೆಲ್ತ್ ಸಿಇಓ ಅವನಿ ಸಿನ್ಹಾ, ದೆಹಲಿ, ಮಹಾರಾಷ್ಟ್ರ, ಹರಿಯಾಣ ಹಾಗೂ ಹರಿದ್ವಾರದಲ್ಲಿ 1 ಲಕ್ಷಕ್ಕೂ ಅಧಿಕ ಜನರಿಗೆ ಪರೀಕ್ಷೆ ನಡೆಸಿದ ಬಳಿಕ ಹಾಗೂ ಸರ್ಕಾರದ ಜೊತೆ ಸೇರಿ ಕೆಲಸ ಮಾಡಿದ ಬಳಿಕ ಕಡಿಮೆ ದರದಲ್ಲಿ ಜನರಿಗೆ ಆರ್ಟಿ – ಪಿಸಿಆರ್ ಟೆಸ್ಟಿಂಗ್ ಸೌಕರ್ಯ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.