ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಇಂದು ತಮ್ಮ 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶ್ರೇಯಾ ಘೋಷಾಲ್ ಸುಮಾರು 19 ಭಾಷೆಗಳಲ್ಲಿ ಹಾಡಿ ಸೈ ಅನಿಸಿಕೊಂಡಿದ್ದಾರೆ. 2003ರಂದು ಕನ್ನಡದಲ್ಲಿ ‘ಪ್ಯಾರಿಸ್ ಪ್ರಣಯ’ ಚಿತ್ರದಲ್ಲಿ ಹಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು ತಮ್ಮ ಸಂಗೀತ ಪಯಣದಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇತ್ತೀಚಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದ ‘ಕಣ್ಣು ಹೊಡಿಯಾಕ’ ಎಂಬ ಹಾಡಿಗೆ ಧ್ವನಿಯಾಗಿದ್ದು ಈ ಹಾಡು ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ.
ದರ್ಶನ್ ಕಟೌಟ್ ಗೆ ‘ಬಿಯರ್’ ಸುರಿದು ಸಂಭ್ರಮಿಸಿದ ಅಭಿಮಾನಿಗಳು
ಶ್ರೇಯಾ ಗೋಷಾಲ್ 1984 ಮಾರ್ಚ್ 12ರಂದು ಜನಿಸಿದ್ದು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ ಇಂದು ಅವರ ಅಭಿಮಾನಿಗಳು ಹಾಗೂ ಸಿನಿತಾರೆಯರು ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.