ಮಧ್ಯಪ್ರದೇಶದ ಜಬಲ್ಪುರದಲ್ಲಿ ಭೀಕರ ಘಟನೆ ಬೆಳಕಿಗೆ ಬಂದಿದೆ. ಸಹೋದರಿ ಪತಿಯನ್ನು ಹತ್ಯೆ ಮಾಡಿದ ಆರೋಪಿ ಕತ್ತನ್ನು ಪೊಲೀಸ್ ಠಾಣೆಗೆ ತಂದು ಶರಣಾಗಿದ್ದಾನೆ. ಪೊಲೀಸ್ ಠಾಣೆಗೆ ಬಂದ ವ್ಯಕ್ತಿ ನೋಡಿ ಪೊಲೀಸರು ದಂಗಾಗಿದ್ದಾರೆ. ಇತ್ತ ಪತಿ ಹತ್ಯೆ ಸುದ್ದಿ ಕೇಳಿದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸುಮಾರು 35 ವರ್ಷದ ದೀರಜ್ ಎಂಬಾತನ ಸಹೋದರಿಯನ್ನು ಮೃತ ವ್ಯಕ್ತಿ ಓಡಿಸಿಕೊಂಡು ಹೋಗಿದ್ದ. ಇಬ್ಬರೂ ಮನೆಯವರಿಗೆ ಹೇಳದೆ ಮದುವೆ ಮಾಡಿಕೊಂಡಿದ್ದರು. ಇದು ಆರೋಪಿ ಕೋಪಕ್ಕೆ ಕಾರಣವಾಗಿತ್ತು. ಹೊಲದಲ್ಲಿ ಮಲಗಿದ್ದ ಸಹೋದರಿ ಪತಿ ಮೇಲೆ ದೀರಜ್ ದಾಳಿ ನಡೆಸಿದ್ದಾನೆ. ಕತ್ತು ಕತ್ತರಿಸಿ ಅದನ್ನು ಪೊಲೀಸ್ ಠಾಣೆಗೆ ತಂದಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಕತ್ತರಿಸಿದ ಕೈಗಳು ಹಾಗೂ ಮುಂಡ ಸಿಕ್ಕಿದೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೃತನ ಪತ್ನಿ ಹಾಗೂ ಆರೋಪಿ ತಂಗಿ ಆತ್ಮಹತ್ಯೆಗೆ ಶರಣಾಗಿದ್ದು, ಶವವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.