ಪ್ರಾಣಿಗಳನ್ನು ಪ್ರದರ್ಶನಕ್ಕಿಟ್ಟು ಗ್ರಾಹಕರನ್ನು ಆಕರ್ಷಿಸಲು ಮುಂದಾಗಿರುವ ಚೀನೀ ರೆಸ್ಟೋರಂಟ್ ಒಂದು ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.
ಇತರ ಎಲ್ಲಾ ಹೋಟೆಲ್‌ಗಳ ಸೌಲಭ್ಯಗಳನ್ನು ಕೊಡುವ ಈ ಹೋಟೆಲ್‌ನಲ್ಲಿ ಅತಿಥಿಗಳು ತಮ್ಮ ಕೋಣೆಗಳಿಂದ ಹಿಮಗರಡಿಗಳನ್ನು ನೋಡಬಹುದಾಗಿದೆ.
ಚೀನಾದ ಈಶಾನ್ಯ ಭಾಗದಲ್ಲಿರುವ ಹೈಲಾಂಗ್‌ಜಿಯಾಂಗ್ ಪ್ರಾಂತ್ಯದ ಹಾರ್ಬಿನ್ ಪೋಲಾರ್ ಲ್ಯಾಂಡ್‌ನಲ್ಲಿ ತೆರೆಯಲಾದ ಈ ಹೋಟೆಲ್ ಹೀಗೆ ಹೊಸ ಟ್ರೆಂಡ್ ಒಂದನ್ನು ಹುಟ್ಟುಹಾಕಿದೆ.
ಬೆಚ್ಚಿಬೀಳಿಸುವಂತಿದೆ ಮಹಿಳೆಯರ ದುರ್ವರ್ತನೆಯ ವಿಡಿಯೋ
ಹೋಟೆಲ್‌ಗಳಲ್ಲಿ ಇರುವ ಸಣ್ಣ ಕೋಣೆಗಳಲ್ಲಿ ಹಿಮಗರಡಿಗಳನ್ನು ಇರಿಸಲಾಗಿದ್ದು ಅತಿಥಿಗಳು ಯಾವಾಗಲೂ ಇವುಗಳನ್ನು ವೀಕ್ಷಿಸಬಹುದಾಗಿದೆ.
ಜನರ ಮನರಂಜನೆಗೆ ಹಿಮಗರಡಿಗಳನ್ನು ಬಳಸುವ ಈ ಕ್ರಮವನ್ನು ಖಂಡಿಸಿರುವ ಪ್ರಾಣಿಹಕ್ಕುಗಳ ಸಂಘಟನೆ ಪೇಟಾ, ಈ ಹೋಟೆಲ್‌ಗೆ ಹೋಗಬೇಕಾ ಎಂದು ಅತಿಥಿಗಳು ಬಹಳ ಆಲೋಚನೆ ಮಾಡಿನೋಡಬೇಕಿದೆ ಎಂದಿದೆ.
“ಹಿಮಗರಡಿಗಳು ತಮ್ಮ ಸ್ವಾಭಾವಿಕ ವಾಸಸ್ಥಾನಗಳಲ್ಲಿ ಪ್ರತಿನಿತ್ಯ 18 ಗಂಟೆಗಳ ಕಾಲ ಎಚ್ಚರಿಕೆಯಿಂದ ಇದ್ದು ನಿಜ ಜೀವನವನ್ನು ಅಲ್ಲಿ ಆನಂದಿಸುತ್ತವೆ. ಹಿಮಗರಡಿಗಳು ಧ್ರುವ ಪ್ರದೇಶಗಳಲ್ಲಿ ಇರಬೇಕೇ ಹೊರತು ಖಂಡಿತವಾಗಿಯೂ ಮೃಗಾಲಯ ಅಥವಾ ಹೋಟೆಲ್‌ಗಳಲ್ಲಿ ಅಲ್ಲ” ಎಂದು ಪೇಟಾದ ಹಿರಿಯ ಉಪಾಧ್ಯಕ್ಷ ಜೇಸನ್ ಬೇಕರ್ ಹೇಳಿದ್ದಾರೆ.