15 ವರ್ಷದ ಅಪ್ರಾಪ್ತೆಯನ್ನ 9 ಮಂದಿ ವಿವಿಧ ಸ್ಥಳಗಳಲ್ಲಿ 8 ದಿನಗಳ ನಿರಂತರ ಅತ್ಯಾಚಾರಗೈದ ದಾರುಣ ಘಟನೆ ರಾಜಸ್ಥಾನದ ಜವಹರಲಾಲ್ ಜಿಲ್ಲೆಯಲ್ಲಿ ನಡೆದಿದೆ.
ಬಾಲಕಿ ಕಾಣೆ ಬಗ್ಗೆ ದೂರನ್ನು ದಾಖಲಿಸಿದ ಬಳಿಕ ಬಾಲಕಿಯನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ.
ಇನ್ನು ಈ ಸಂಬಂಧ ಡಿಸಿಪಿ ಮಂಜೀತ್ ಸಿಂಗ್ ಮಾಹಿತಿ ನೀಡಿದ್ದು, ಅಪ್ರಾಪ್ತೆಗೆ ಬ್ಯಾಗ್ ಕೊಡಿಸೋದಾಗಿ ಆಮಿಷವೊಡ್ಡಿದ ಬುಲ್ಬುಲ್ ಹಾಗೂ ಇನ್ನೊಬ್ಬ ಯುವಕ ಆಕೆಯನ್ನ ಜವಹರಲಾಲ್ ನಗರಕ್ಕೆ ಕರೆದುಕೊಂಡು ಹೋಗಿದ್ರು ಎಂದು ಹೇಳಿದ್ದಾರೆ.
ಪಾರ್ಕ್ನಲ್ಲಿ ಇನ್ನೊಂದಿಷ್ಟು ಮಂದಿ ಯುವಕರು ಸೇರಿದ್ದು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಜವಹರಲಾಲ್ನ ವಿವಿಧ ಏರಿಯಾದಲ್ಲಿ ಬಾಲಕಿಯನ್ನ ಕೊಂಡೊಯ್ದು 8 ದಿನಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ್ದಾರೆ. ಬಾಲಕಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.