ಮಧ್ಯ ಪ್ರದೇಶದ ರಾಜಗಢ ಜಿಲ್ಲೆಯ ಕೋರ್ಟ್ನಲ್ಲಿ ನ್ಯಾಯಾಧೀಶರು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಓರ್ವ ಅಪರಾಧಿಗೆ ಜೀವಾವಧಿ ಶಿಕ್ಷೆ ಘೋಷಿಸಿದ್ದರು. ಶಿಕ್ಷೆ ಪ್ರಮಾಣವನ್ನ ಕೇಳಿದ ಅಪರಾಧಿ ಒಮ್ಮೆ ಆಘಾತಕ್ಕೆ ಒಳಗಾಗಿದ್ದ.
ಇದರ ಬಳಿಕ ಸಿಕ್ಕ ಅವಕಾಶವನ್ನ ಬಳಸಿಕೊಂಡ ಕೈದಿ ಜೀತೇಂದ್ರ ಭೀಲ್ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಕೋರ್ಟ್ನಿಂದ ಕಾಲ್ಕಿತ್ತಿದ್ದಾನೆ. ಈ ಘಟನೆ ಬಳಿಕ ರಾಜಗಢ ಎಸ್ಪಿ ಪ್ರದೀಪ್ ಶರ್ಮಾ ಸೇರಿದಂತೆ ಅನೇಕ ಪೊಲೀಸರು ಕೈದಿ ಪತ್ತೆಗಾಗಿ ಕಿಲೋಮೀಟರ್ಗಟ್ಟಲೇ ದೂರ ಹೋಗಿ ನೋಡಿದ್ರೂ ಸಹ ಕೈದಿಯ ಸುಳಿವು ಸಿಕ್ಕಿಲ್ಲ.
ಅತ್ಯಾಚಾರ ಕೇಸ್ನಡಿಯಲ್ಲಿ ಜೈಲು ಸೇರಿದ್ದ ಜೀತೇಂದ್ರನಿಗೆ ಕೋರ್ಟ್ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನ ಕೇಳುತ್ತಿದ್ದಂತೆಯೇ ಅಪರಾಧಿ ಕೋರ್ಟ್ ಸಿಬ್ಬಂದಿಗೆ ಡಿಕ್ಕಿ ಹೊಡೆದು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಪೊಲೀಸರು ಜೀತೇಂದ್ರನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. 2 ವರ್ಷಗಳ ಹಿಂದೆ ಜೀತೇಂದ್ರ ಮಾನಸಿಕ ಅಸ್ವಸ್ಥ ಬಾಲಕಿಯ ಮೇಲೆ ಅತ್ಯಾಚಾರಗೈದಿದ್ದ. ಈ ಬಾಲಕಿ ಗರ್ಭಿಣಿ ಕೂಡ ಆಗಿದ್ದಳು. ಕುಟುಂಬಸ್ಥರು ಕೇಳಿದ ಬಳಿಕ ಬಾಲಕಿ ಜೀತೇಂದ್ರನ ಹೆಸರನ್ನ ಹೇಳಿದ್ದಳು. ಇದಾದ ಬಳಿಕ ಸಂತ್ರಸ್ಥೆ ಕುಟುಂಬಸ್ಥರು ಜೀತೇಂದ್ರನ ವಿರುದ್ಧ ದೂರು ದಾಖಲಿಸಿದ್ದರು.