ಶಾಖ ಹೆಚ್ಚಾದ್ರೆ ಮಂಜುಗಡ್ಡೆಗಳು ಕರಗುತ್ವೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಮಂಜುಗಡ್ಡೆಯಿಂದಲೇ ನಿರ್ಮಾಣವಾದ ಹೋಟೆಲ್ ಮಾತ್ರ ವರ್ಷದ 365 ದಿನವೂ ಕರಗೋದಿಲ್ಲ. ಈ ವಿಶಿಷ್ಠ ಹೋಟೆಲ್ನ್ನು ಉತ್ತರ ಸ್ವೀಡನ್ನ ಸಣ್ಣ ಹಳ್ಳಿಯೊಂದರಲ್ಲಿ ನಿರ್ಮಾಣ ಮಾಡಲಾಗಿದೆ.
2100 ಚದರ ಮೀಟರ್ ವಿಸ್ತೀರ್ಣ ಹೊಂದಿರುವ ಈ ಮಂಜುಗಡ್ಡೆಯ ಹೋಟೆಲ್ ಆರ್ಟ್ ಹಾಲ್, ಡಿಲಕ್ಸ್ ಸೂಟ್ಸ್ ಹಾಗೂ ಐಸ್ ಬಾರ್ನ್ನು ಹೊಂದಿದೆ. ಅಲ್ಲದೇ ಇನ್ನೊಂದು ಕೊಠಡಿಯಲ್ಲಿ ಮಂಜುಗಡ್ಡೆ ಹೋಟೆಲ್ನ ಸಂಪೂರ್ಣ ಇತಿಹಾಸವಿದೆ. ಫೋಟೋ ಹಾಗೂ ಸಣ್ಣ ವಿಡಿಯೋವನ್ನ ನಿಮಗೆ ತೋರಿಸಲಾಗುತ್ತೆ.
ಹೊಸ ವಿಧಾನದಲ್ಲಿ ಹಾಕಿ ಆಡೋದನ್ನ ಕಲಿಸಿದ್ದಾನೆ ಈ ಪುಟಾಣಿ ಪೋರ….!
ಈ ಹೋಟೆಲ್ನ ಮೂಲವನ್ನ ಉಕ್ಕು ಹಾಗೂ ಕಾಂಕ್ರೀಟ್ನಿಂದ ನಿರ್ಮಾಣ ಮಾಡಲಾಗಿದೆ. ಬೇಸಿಗೆ ಸಂದರ್ಭದಲ್ಲಿ ಮಂಜುಗಡ್ಡೆ ಕರಗದಂತೆ ಮಾಡುವ ಸಲುವಾಗಿ ಮೇಲ್ಛಾವಣಿಯನ್ನ ನಿರ್ಮಿಸಲಾಗಿದೆ.
ಈ ಮಂಜುಗಡ್ಡೆಯ ಹೋಟೆಲ್ನಲ್ಲಿ ಬೆಳಗ್ಗೆ ಕಲಾ ವಸ್ತುಪ್ರದರ್ಶನ ಇರುತ್ತೆ ಹಾಗೂ ರಾತ್ರಿ ವೇಳೆಯಲ್ಲಿ ಹೋಟೆಲ್ ಸೇವೆಗಳು ಲಭ್ಯವಿರುತ್ತೆ. ಅಂದರೆ ರಾತ್ರಿ ವೇಳೆ ನೀವು ಸ್ಥಳೀಯ ಕಲಾವಿದರು ನಿರ್ಮಿಸಿದ ಐಸ್ ಕಲಾಕೃತಿಗಳ ನಡುವೆ ಮಲಗಬಹುದಾಗಿದೆ.