alex Certify ತೈಲ ಬೆಲೆ ಏರಿಕೆ ಖಂಡಿಸಿ ಎತ್ತಿನ ಬಂಡಿ ಏರಿದ ಶಾಸಕರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೈಲ ಬೆಲೆ ಏರಿಕೆ ಖಂಡಿಸಿ ಎತ್ತಿನ ಬಂಡಿ ಏರಿದ ಶಾಸಕರು….!

ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ – ಡಿಸೇಲ್​ ಬೆಲೆ ಏರಿಕೆ ಕಾಣುತ್ತಿದೆ. ಪಂಜಾಬ್​​ನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ರಾಜ್ಯ ತೆರಿಗೆಯನ್ನ ಕಡಿಮೆ ಮಾಡುವಂತೆ ಸರ್ಕಾರದ ಮುಂದೆ ಇಡಲಾಗಿದ್ದ ಬೇಡಿಕೆಯನ್ನ ನಿರಾಕರಿಸಿದ ಕಾರಣ ಶರಣ್​ಜೀತ್​ ಸಿಂಗ್​ ಧಿಲ್ಲೋನ್​ ಹಾಗೂ ಬಿಕ್ರಂ ಸಿಂಗ್​ ಮಜಿಥಿಯಾ ನೇತೃತ್ವದ ಶಿರೋಮಣಿ ಅಕಾಲಿ ದಳದ ಶಾಸಕರು ಇಂದು ಬೆಳಗ್ಗೆ ಸದನಕ್ಕೆ ಎತ್ತಿನ ಗಾಡಿಯ ಮೇಲೆ ಬಂದಿದ್ದಾರೆ.

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ರಾಜ್ಯ ತೆರಿಗೆಯನ್ನ ಕಡಿಮೆ ಮಾಡುವ ಮೂಲಕ ಪ್ರತಿಲೀಟರ್​ ಪೆಟ್ರೋಲ್​ ಬೆಲೆಯಲ್ಲಿ ಕನಿಷ್ಟ 5 ರೂಪಾಯಿ ಕಡಿಮೆ ಮಾಡುವಂತೆ ಸರ್ಕಾರದ ಮುಂದೆ ಬೇಡಿಕೆ ಇಡಲಾಗಿತ್ತು.

ಎತ್ತಿನ ಗಾಡಿಯ ಮೇಲೆ ಬಂದ ಎಸ್​ಎಡಿ ಶಾಸಕರು ಜನರನ್ನ ಲೂಟಿ ಮಾಡೋದನ್ನ ನಿಲ್ಲಿಸಿ, ವ್ಯಾಟ್​​ನ್ನು ಕಡಿಮೆ ಮಾಡಿ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೇ ಪಂಜಾಬ್​​ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಸುನಿಲ್​ ಜಾಖರ್​ ಮೇಲೆ ಆಕ್ರೋಶ ಹೊರಹಾಕಿದ ಎಸ್​ಎಡಿ ಶಾಸಕರು, ​ ತೈಲದ ಮೇಲೆ ವಿಧಿಸಲಾಗುವ ವ್ಯಾಟ್​ ಕಡಿಮೆ ಮಾಡಲು ನಿರಾಕರಿಸುವ ಮೂಲಕ ಸುನೀಲ್​ ನೇತೃತ್ವದ ಕಾಂಗ್ರೆಸ್​ ಪಕ್ಷ ಜನರನ್ನ ಮೂರ್ಖರನ್ನಾಗಿ ಮಾಡ್ತಿದೆ ಎಂಧು ಹೇಳಿದ್ರು.

ಎಸ್​ಎಡಿ ಶಾಸಕಾಂಗ ವಿಭಾಗದ ನಾಯಕ ಶರಣ್​ಜೀತ್​ ಸಿಂಗ್ ಧಿಲ್ಲೋನ್​, ಶೂನ್ಯ ಅವಧಿ ವೇಳೆ ಸರ್ಕಾರದ ಮುಂದೆ ಪೆಟ್ರೋಲ್​ ಹಾಗೂ ಡೀಸೆಲ್​ಗಳ ಮೇಲಿನ ವ್ಯಾಟ್​ ದರ ಕಡಿಮೆ ಮಾಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಇದಕ್ಕೆ ಸರ್ಕಾರ ಒಪ್ಪದ ಕಾರಣ ಎಸ್​ಎಡಿ ಶಾಸಕರು ಈ ರೀತಿ ಆಕ್ರೋಶ ಹೊರಹಾಕಿದ್ದಾರೆ.

ಪೆಟ್ರೋಲ್​ ದರವನ್ನ ಕಡಿಮೆ ಮಾಡುವ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಮಾತನಾಡಲು ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸಲು ಸಿದ್ಧರಿದ್ದೇವೆ. ನಾವು ಈ ವಿಚಾರವಾಗಿ ದೆಹಲಿಯಲ್ಲೂ ಪ್ರತಿಭಟನೆ ನಡೆಸಲು ತಯಾರಿದ್ದೇವೆ. ಆದರೆ ಇದಕ್ಕೂ ಮೊದಲು ರೈತರು ಹಾಗೂ ಶ್ರೀಸಾಮಾನ್ಯನ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ವ್ಯಾಟ್​ ದರ ಕಡಿಮೆ ಮಾಡಲಿ ಎಂದು ಆಗ್ರಹಿಸಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...