ರೈಲು ನಿಲ್ದಾಣಗಳಲ್ಲಿ ಅನಗತ್ಯ ಜನಸಂದಣಿಯನ್ನ ತಪ್ಪಿಸುವ ಸಲುವಾಗಿ ಫ್ಲಾಟ್ಫಾರಂ ಟಿಕೆಟ್ ದರ 10 ರೂಪಾಯಿಯಿಂದ 30 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಮುಂಬೈನ ಮೆಟ್ರೋ ವಲಯದಲ್ಲಿ ಫ್ಲಾಟ್ಫಾರಂ ಟಿಕೆಟ್ ದರವನ್ನ 50 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಬೇಸಿಗೆ ಕಾಲದಲ್ಲಿ ಅನಗತ್ಯ ಜನಸಂದಣಿಯನ್ನ ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆ ಜಂಟಿಯಾಗಿ ಈ ನಿರ್ಧಾರಕ್ಕೆ ಬಂದಿತ್ತು.
ಇದೀಗ ದೇಶದ ಇತರೆ ರೈಲು ನಿಲ್ದಾಣಗಳ ಫ್ಲಾಟ್ ಫಾರಂ ಟಿಕೆಟ್ ದರವನ್ನೂ ಏರಿಕೆ ಮಾಡಲಾಗಿದೆ. ಈ ನೂತನ ಫ್ಲಾಟ್ಫಾರಂ ಟಿಕೆಟ್ ದರ ಜೂನ್ 15ರವರೆಗೆ ಇರಲಿದೆ.
ಇನ್ನು ಈ ವಿಚಾರವಾಗಿ ಸ್ಪಷ್ಟನೆಯನ್ನೂ ನೀಡಿರುವ ಭಾರತೀಯ ರೈಲ್ವೆ ಇಲಾಖೆ ಸಚಿವಾಲಯ, ಜನಸಂದಣಿಯನ್ನ ನಿಯಂತ್ರಣ ಮಾಡುವ ಸಲುವಾಗಿ ಇದೊಂದು ತಾತ್ಕಾಲಿಕ ಕ್ರಮವಾಗಿದೆ. ರೈಲ್ವೆ ನಿಲ್ದಾಣಗಳಲ್ಲಿ ಸೋಂಕು ಹರಡದಂತೆ ತಡೆಯುವ ಸಲುವಾಗಿ ಈ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ. ಎಂದು ಹೇಳಿದೆ.