ಜೈಪುರ: ಜ್ಞಾನಾರ್ಜನೆ, ವಿದ್ಯಾಭ್ಯಾಸಕ್ಕೆ ವಯಸ್ಸಿನ ಹಂಗಿಲ್ಲ ಎಂಬುದಕ್ಕೆ ಈ ಸ್ಟೋರಿ ಉದಾಹರಣೆ. 62 ವರ್ಷದ ವಯಸ್ಸಿನಲ್ಲಿಯೂ ವ್ಯಕ್ತಿಯೊಬ್ಬರು ಪದವಿ ಪರೀಕ್ಷೆಯನ್ನು ಬರೆದು ಗಮನ ಸೆಳೆದಿದ್ದಾರೆ.
ರಾಜಸ್ಥಾನದ ಉದಯಪುರ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ 62 ವರ್ಷದ ಫೂಲ್ ಸಿಂಗ್ ಮೀನಾ ಇದೀಗ ಡಿಗ್ರಿ ಪರೀಕ್ಷೆಯನ್ನು ಬರೆದಿದ್ದಾರೆ. ಈ ಮೂಲಕ 40 ವರ್ಷಗಳ ಬಳಿಕ ತಮ್ಮ ವಿದ್ಯಾಭ್ಯಾಸ ಪುನರಾರಂಭಿಸಿದ್ದಾರೆ.
ವಿ.ಕೆ.ಶಶಿಕಲಾ ಮಹತ್ವದ ನಿರ್ಧಾರ – ಬೆಂಬಲಿಗರಿಗೆ ಶಾಕ್ ನೀಡಿದ ಚಿನ್ನಮ್ಮ
ಐದು ಜನ ಪುತ್ರಿಯರ ಪ್ರೋತ್ಸಾಹದಿಂದಾಗಿ ಫೂಲ್ ಸಿಂಗ್ ಮತ್ತೆ ಓದಿನತ್ತ ಆಸಕ್ತಿ ಹೊಂದಿದ್ದು, ಈಗ ಅಂತಿಮ ವರ್ಷದ ಬಿಎ ಪರೀಕ್ಷೆ ಬರೆದಿದ್ದಾರೆ. ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಎಂಎ ಮಾಡುವ ಬಗ್ಗೆ ಯೋಚಿಸಿದ್ದು, ಅದಾದ ಬಳಿಕ ಪಿಹೆಚ್ ಡಿ ಮಾಡುವುದಾಗಿಯೂ ತಿಳಿಸಿದ್ದಾರೆ.
2013ರಿಂದ ಶಾಸಕರಾಗಿರುವ ಫೂಲ್ ಸಿಂಗ್ ಚಿಕ್ಕವಯಸ್ಸಿನಲ್ಲಿ 7ನೇ ತರಗತಿವರೆಗೆ ಓದಿ ಅಲ್ಲಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರಂತೆ. ಇದೀಗ ಮಕ್ಕಳಿಂದಾಗಿ ಮತ್ತೆ ಓದುವ ಹುಮ್ಮಸ್ಸು ಬಂದಿದ್ದು, ಪಿ ಹೆಚ್ ಡಿ ಕೂಡ ಮಾಡಬೇಕು ಎಂದುಕೊಂಡಿದ್ದೇನೆ ಎಂದಿದ್ದಾರೆ.