ಹೆಚ್ಡಿಎಫ್ಸಿ ಬ್ಯಾಂಕ್ ಬುಧವಾರ ಗೃಹ ಸಾಲಗಳ ಮೇಲಿನ ಬಡ್ಡಿ ದರವನ್ನ 5 ಬೇಸಿಸ್ ಪಾಯಿಂಟ್ನಿಂದ 6.75 ಪ್ರತಿಶತಕ್ಕೆ ಇಳಿಸಿದೆ. ಈ ಬದಲಾವಣೆಯು ಗುರುವಾರದಿಂದಲೇ ಜಾರಿಗೆ ಬರಲಿದೆ.
ಹೆಚ್ಡಿಎಫ್ಸಿ ಬ್ಯಾಂಕ್ ಕೂಡ ಗೃಹ ಸಾಲಗಳ ಮೇಲಿನ ಆರ್ಪಿಎಲ್ಆರ್ ಕಡಿಮೆ ಮಾಡಿದೆ. ಆದರೆ ಎಆರ್ಹೆಚ್ಎಲ್ 5 ಬೇಸಿಸ್ ಪಾಯಿಂಟ್ಗಳ ಮಾನದಂಡ ಹೊಂದಿದೆ. ಇದು ಕೂಡ ಗುರುವಾರದಿಂದಲೇ ಜಾರಿಗೆ ಬರಲಿದೆ. ಈ ಬದಲಾವಣೆಯಿಂದಾಗಿ ಹೆಚ್ಡಿಎಫ್ಸಿಯಲ್ಲಿ ಈಗಾಗಲೇ ಗೃಹ ಸಾಲ ಹೊಂದಿರುವವರಿಗೆ ಲಾಭವಾಗಲಿದೆ ಎನ್ನಲಾಗಿದೆ.
ಕಳೆದ ವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಮಹೀಂದ್ರ ಬ್ಯಾಂಕ್ ಕೂಡ ಗೃಹ ಸಾಲಗಳ ಮೇಲಿನ ಬಡ್ಡಿದರವನ್ನ ಕಡಿಮೆ ಮಾಡಿದ್ದವು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ತರಹೇವಾರಿ ವಿಧದ ಗೃಹ ಸಾಲಗಳನ್ನ ಒದಗಿಸುತ್ತಿದೆ. ಸರ್ಕಾರಿ ನೌಕರರಿಗೆ ಪ್ರತ್ಯೇಕ ಗೃಹ ಸಾಲ, ಸೇನೆಯಲ್ಲಿರುವವರಿಗಾಗಿ ಶೌರ್ಯ ಗೃಹ ಸಾಲ, ಮ್ಯಾಕ್ಸ್ಗೇನ್ ಗೃಹ ಸಾಲ, ಎಸ್ಬಿಐ ಸ್ಮಾರ್ಟ್ ಹೋಂ ಹೀಗೆ ಸಾಕಷ್ಟು ವಿಧದ ಗೃಹ ಸಾಲವನ್ನ ಎಸ್ಬಿಐ ಹೊಂದಿದೆ.
ಆಭರಣ ಪ್ರಿಯರಿಗೆ ಖುಷಿ ಸುದ್ದಿ: ದಾಖಲೆ ಮಟ್ಟದಲ್ಲಿ ಇಳಿಕೆ ಕಂಡ ʼಚಿನ್ನʼದ ಬೆಲೆ
ಕೋಟಕ್ ಮಹೀಂದ್ರಾ ಕೂಡ ತನ್ನ ಗೃಹ ಸಾಲದ ಬಡ್ಡಿದರದಲ್ಲಿ 10 ಬೇಸಿಸ್ ಪಾಯಿಂಟ್ಗಳನ್ನ ಸೀಮಿತ ಅವಧಿಗೆ ಕಡಿತಗೊಳಿಸುತ್ತದೆ. ಅಲ್ಲದೇ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ನಮ್ಮಲ್ಲಿ ಗೃಹ ಸಾಲ ಸಿಗಲಿದೆ ಎಂದು ಕೋಟಕ್ ಹೇಳಿಕೊಂಡಿದೆ. ಮಾರ್ಚ್ 31ರ ಒಳಗಾಗಿ ಈ ಬ್ಯಾಂಕ್ನಲ್ಲಿ ಗೃಹ ಸಾಲ ಪಡೆಯುವವರು 6.65 ಪ್ರತಿಶತ ಬಡ್ಡಿದರ ವಿಧಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ.