alex Certify ಗೃಹ ಸಾಲ ಪಡೆದವರಿಗೆ HDFC ಬ್ಯಾಂಕ್‌ ನಿಂದ ‘ಗುಡ್​ ನ್ಯೂಸ್’​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೃಹ ಸಾಲ ಪಡೆದವರಿಗೆ HDFC ಬ್ಯಾಂಕ್‌ ನಿಂದ ‘ಗುಡ್​ ನ್ಯೂಸ್’​

ಹೆಚ್​​ಡಿಎಫ್​ಸಿ ಬ್ಯಾಂಕ್​ ಬುಧವಾರ ಗೃಹ ಸಾಲಗಳ ಮೇಲಿನ ಬಡ್ಡಿ ದರವನ್ನ 5 ಬೇಸಿಸ್​ ಪಾಯಿಂಟ್​​ನಿಂದ 6.75 ಪ್ರತಿಶತಕ್ಕೆ ಇಳಿಸಿದೆ. ಈ ಬದಲಾವಣೆಯು ಗುರುವಾರದಿಂದಲೇ ಜಾರಿಗೆ ಬರಲಿದೆ.

ಹೆಚ್​ಡಿಎಫ್​ಸಿ ಬ್ಯಾಂಕ್​ ಕೂಡ ಗೃಹ ಸಾಲಗಳ ಮೇಲಿನ ಆರ್​​ಪಿಎಲ್​ಆರ್​​ ಕಡಿಮೆ ಮಾಡಿದೆ. ಆದರೆ ಎಆರ್​ಹೆಚ್​ಎಲ್​​ 5 ಬೇಸಿಸ್ ಪಾಯಿಂಟ್​ಗಳ ಮಾನದಂಡ ಹೊಂದಿದೆ. ಇದು ಕೂಡ ಗುರುವಾರದಿಂದಲೇ ಜಾರಿಗೆ ಬರಲಿದೆ. ಈ ಬದಲಾವಣೆಯಿಂದಾಗಿ ಹೆಚ್​ಡಿಎಫ್​ಸಿಯಲ್ಲಿ ಈಗಾಗಲೇ ಗೃಹ ಸಾಲ ಹೊಂದಿರುವವರಿಗೆ ಲಾಭವಾಗಲಿದೆ ಎನ್ನಲಾಗಿದೆ.

ಕಳೆದ ವಾರ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ, ಕೋಟಕ್​ ಮಹೀಂದ್ರ ಬ್ಯಾಂಕ್​​ ಕೂಡ ಗೃಹ ಸಾಲಗಳ ಮೇಲಿನ ಬಡ್ಡಿದರವನ್ನ ಕಡಿಮೆ ಮಾಡಿದ್ದವು. ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ತನ್ನ ಗ್ರಾಹಕರಿಗೆ ತರಹೇವಾರಿ ವಿಧದ ಗೃಹ ಸಾಲಗಳನ್ನ ಒದಗಿಸುತ್ತಿದೆ. ಸರ್ಕಾರಿ ನೌಕರರಿಗೆ ಪ್ರತ್ಯೇಕ ಗೃಹ ಸಾಲ, ಸೇನೆಯಲ್ಲಿರುವವರಿಗಾಗಿ ಶೌರ್ಯ ಗೃಹ ಸಾಲ, ಮ್ಯಾಕ್ಸ್​ಗೇನ್​ ಗೃಹ ಸಾಲ, ಎಸ್​ಬಿಐ ಸ್ಮಾರ್ಟ್ ಹೋಂ ಹೀಗೆ ಸಾಕಷ್ಟು ವಿಧದ ಗೃಹ ಸಾಲವನ್ನ ಎಸ್​ಬಿಐ ಹೊಂದಿದೆ.

ಆಭರಣ ಪ್ರಿಯರಿಗೆ ಖುಷಿ ಸುದ್ದಿ: ದಾಖಲೆ ಮಟ್ಟದಲ್ಲಿ ಇಳಿಕೆ ಕಂಡ ʼಚಿನ್ನʼದ ಬೆಲೆ

ಕೋಟಕ್​ ಮಹೀಂದ್ರಾ ಕೂಡ ತನ್ನ ಗೃಹ ಸಾಲದ ಬಡ್ಡಿದರದಲ್ಲಿ 10 ಬೇಸಿಸ್​ ಪಾಯಿಂಟ್​ಗಳನ್ನ ಸೀಮಿತ ಅವಧಿಗೆ ಕಡಿತಗೊಳಿಸುತ್ತದೆ. ಅಲ್ಲದೇ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ನಮ್ಮಲ್ಲಿ ಗೃಹ ಸಾಲ ಸಿಗಲಿದೆ ಎಂದು ಕೋಟಕ್​ ಹೇಳಿಕೊಂಡಿದೆ. ಮಾರ್ಚ್ 31ರ ಒಳಗಾಗಿ ಈ ಬ್ಯಾಂಕ್​​ನಲ್ಲಿ ಗೃಹ ಸಾಲ ಪಡೆಯುವವರು 6.65 ಪ್ರತಿಶತ ಬಡ್ಡಿದರ ವಿಧಿಸಲಾಗುವುದು ಎಂದು ಬ್ಯಾಂಕ್​ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...