alex Certify OMG: ಸಾವಿರ ರೂಪಾಯಿಗೂ ಅಧಿಕವಂತೆ ಈ ಕೋಳಿಯ ಕೆ.ಜಿ. ಮಾಂಸದ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಸಾವಿರ ರೂಪಾಯಿಗೂ ಅಧಿಕವಂತೆ ಈ ಕೋಳಿಯ ಕೆ.ಜಿ. ಮಾಂಸದ ಬೆಲೆ

ಕೋಳಿ ಮಾಂಸಕ್ಕೆ ಇರುವ ಬೇಡಿಕೆ ಒಂದೆಡೆಯಾದ್ರೆ ಕಡಕ್ನಾ​ಥ್​ ಕೋಳಿ ಮಾಂಸಕ್ಕೆ ಇರುವ ಬೇಡಿಕೆಯೇ ಇನ್ನೊಂದ್​ ಕಡೆ. ಕಪ್ಪು ಬಣ್ಣದ ಮಾಂಸದಿಂದಾಗಿ ಫೇಮಸ್​ ಆಗಿರುವ ಈ ಕಡಕ್​ನಾಥ್​ ಕೋಳಿ ಮಾಂಸ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ಹೇಳಲಾಗುತ್ತೆ.

ಇದರಲ್ಲಿ ಕೊಬ್ಬಿನ ಅಂಶ ಕಡಿಮೆ ಇರೋದ್ರಿಂದ ಆರೋಗ್ಯ ಕಾಪಾಡಿಕೊಳ್ಳುವವರಿಗೆ ಕಡಕ್​​ನಾಥ್​​ ಚಿಕನ್​ ಅಂದ್ರೆ ಪಂಚಪ್ರಾಣ. ಈ ಕಡಕ್​​ನಾಥ್​ ಚಿಕನ್​ ಇದೀಗ ಹೈದರಾಬಾದ್​ನಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಮಾಂಸವಾಗಿದೆ. ಡೀಲರ್​ಗಳು ನೀಡಿರುವ ಮಾಹಿತಿಯ ಪ್ರಕಾರ ಕಡಕ್​​ನಾಥ್​ ಚಿಕನ್​ ಪ್ರತಿ ಕೆಜಿಯ ಬೆಲೆ 1000 ರೂಪಾಯಿಯಿಂದ 1200 ರೂಪಾಯಿಗಳವರೆಗೆ ಇದೆ. ಇನ್ನು ಪ್ರತಿ ಕೋಳಿಯು ಕೆಜಿಗೆ 850 ರೂಪಾಯಿಯಂತೆ ಮಾರಾಟವಾಗ್ತಿದೆ.

ಈ ತಳಿಯು ಮಧ್ಯ ಪ್ರದೇಶ, ಚತ್ತೀಸಗಢ, ಗುಜರಾತ್​ ಹಾಗೂ ರಾಜಸ್ಥಾನದ ಕೆಲ ಭಾಗಗಳಲ್ಲಿ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತೆ. ಬುಡಕಟ್ಟು ಸಮುದಾಯದವರು ಹೆಚ್ಚಾಗಿ ಈ ಕೋಳಿಯನ್ನ ಸಾಕ್ತಾರೆ. ಈ ಕೋಳಿಯ ಗರಿಯಿಂದ ಹಿಡಿದು ಮಾಂಸದವರೆಗೂ ಬಣ ಕಪ್ಪಗಿರುತ್ತೆ. ಇದರ ಮೊಟ್ಟೆ ಕೂಡ ಕಪ್ಪು ಎಂದು ಅನೇಕರು ಹೇಳುತ್ತರಾದರೂ ಕಡಕ್​​ನಾಥ್​ ಕೋಳಿ ಮೊಟ್ಟೆ ಕಂದು ಹಾಗೂ ಗುಲಾಬಿ ಬಣ್ಣದ ನಡುವೆ ಇದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...