ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನದ ಎರಡನೇ ಹಂತ ಮಾರ್ಚ್ 1ರಿಂದ ಶುರುವಾಗಿದೆ. ಅಭಿಯಾನದಡಿ ಅನೇಕ ಗಣ್ಯರು ಕೊರೊನಾ ಲಸಿಕೆ ಹಾಕಿಸಿಕೊಳ್ತಿದ್ದಾರೆ. ಮಂಗಳವಾರ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.
ರವಿಶಾಸ್ತ್ರಿ ಅಹಮದಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಮೊದಲ ಡೋಸ್ ಹಾಕಿಸಿಕೊಂಡ ರವಿಶಾಸ್ತ್ರಿ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ರವಿಶಾಸ್ತ್ರಿ, ವಿಜ್ಞಾನಿಗಳು ಹಾಗೂ ವೈದ್ಯಕೀಯ ತಂಡದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ʼಮ್ಯಾನ್ ಆಫ್ ದ ಮ್ಯಾಚ್ʼ ಗೆದ್ದವನಿಗೆ 5 ಲೀಟರ್ ಪೆಟ್ರೋಲ್ ಗಿಫ್ಟ್
ಕೋವಿಡ್ -19 ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದ್ದೇನೆ. ಸಾಂಕ್ರಾಮಿಕ ರೋಗದ ವಿರುದ್ಧ ಭಾರತವನ್ನು ಸಶಕ್ತಗೊಳಿಸಿದ ವೈದ್ಯರು ಮತ್ತು ವಿಜ್ಞಾನಿಗಳಿಗೆ ಧನ್ಯವಾದಗಳು. ಅಪೊಲೊ ಆಸ್ಪತ್ರೆಯ ಕಾಂತಬೆನ್ ಮತ್ತು ಅವರ ತಂಡದ ಕೆಲಸ ಮೆಚ್ಚುಗೆ ತಂದಿದೆ ಎಂದು ಟ್ವಿಟ್ ಮಾಡಿದ್ದಾರೆ.
2017ರಿಂದ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿರುವ 58 ವರ್ಷದ ರವಿಶಾಸ್ತ್ರಿ, 80 ಟೆಸ್ಟ್ ಪಂದ್ಯಗಳಲ್ಲಿ 3,830 ರನ್ ಪಡೆದು 151 ವಿಕೆಟ್ ಕಬಳಿಸಿದ್ದರು. 150 ಏಕದಿನ ಪಂದ್ಯಗಳನ್ನಾಡಿರುವ ರವಿಶಾಸ್ತ್ರಿ,3108 ರನ್ ಹಾಗೂ 129 ವಿಕೆಟ್ ಕಬಳಿಸಿದ್ದಾರೆ.