ಇತರರನ್ನ ಪ್ರೀತಿ ಮಾಡುವ ಮುನ್ನ ಮೊದಲು ನಾವು ನಮ್ಮನ್ನ ಪ್ರೀತಿ ಮಾಡಿಕೊಳ್ಳೋದನ್ನ ಕಲಿಯೋದು ತುಂಬಾನೇ ಮುಖ್ಯ. ಈ ಮಾತನ್ನ ಅಮೆರಿಕದ ಯುವತಿಯೊಬ್ಬರು ಬಹಳ ಗಂಭೀರವಾಗಿ ತೆಗೆದುಕೊಂಡಂತೆ ಎನಿಸುತ್ತೆ.
ಮೆಗ್ ಟೇಲರ್ ಮಾರ್ರಿಸನ್ ಎಂಬ ಹೆಸರಿನ ಅಟ್ಲಾಂಟಾ ನಿವಾಸಿ ಕಳೆದ ವರ್ಷ ಅಕ್ಟೋಬರ್ 31ರಂದು ತನ್ನ ಪ್ರಿಯತಮನನ್ನ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಇವರಿಬ್ಬರ ನಡುವೆ ಜೂನ್ ತಿಂಗಳಲ್ಲೇ ಬ್ರೇಕಪ್ ಆದ ಕಾರಣ ಈ ಮದುವೆ ಮುರಿದುಬಿದ್ದಿತ್ತು.
ಸ್ಕೈ ಡೈವಿಂಗ್ ಮಾಡುವಾಗಲೇ ಯುವಕನಿಂದ ಗೆಳತಿಗೆ ʼಪ್ರೇಮʼ ನಿವೇದನೆ
ಆದರೆ ಅಷ್ಟರಲ್ಲಾಗಲೇ ಮೆಗ್ ಮದುವೆಗೆ ಎಲ್ಲಾ ತಯಾರಿಯನ್ನ ಮಾಡಿಕೊಂಡಿದ್ದಳು. ಮದುವೆ ರದ್ದಾಯ್ತು ಅಂತ ಎಲ್ಲಾ ಬುಕ್ಕಿಂಗ್ಗಳನ್ನ ಕ್ಯಾನ್ಸಲ್ ಮಾಡುವ ಬದಲು ಆಕೆ ತನ್ನನ್ನ ತಾನೇ ಮದುವೆಯಾಗಿದ್ದಾಳೆ.
ಎಲ್ಲಾ ಮಧುಮಗಳಂತೆ ತಯಾರಾಗಿದ್ದು ಮಾತ್ರವಲ್ಲದೇ ಕೇಕ್ ತರಿಸಿ ಎಲ್ಲಾ ತಯಾರಿಯನ್ನ ಮಾಡಿ ಡೈಮಂಡ್ ಉಂಗುರವನ್ನ ತನ್ನ ಕೈಗೆ ತಾನೇ ತೊಡಿಸಿಕೊಂಡಿದ್ದಾಳೆ.