ಹೈದರಾಬಾದ್: ಅನುಮತಿಯಿಲ್ಲದಿದ್ದರೂ ಚಿತ್ತೂರು ಜಿಲ್ಲೆಯಲ್ಲಿ ಪಕ್ಷದ ಪರವಾಗಿ ಪ್ರಚಾರಕ್ಕೆ ಮುಂದಾಗಿದ್ದ ಆಂಧ್ರಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.
ತಿರುಪತಿ ವಿಮಾನ ನಿಲ್ದಾಣದ ಮೂಲಕ ಚಿತ್ತೂರಿಗೆ ತೆರಳಲು ಆಗಮಿಸಿದ್ದ ಚಂದ್ರಬಾಬು ನಾಯ್ಡು ಅವರನ್ನು ವಿಮಾನ ನಿಲ್ದಾಣದಲ್ಲೇ ಪೊಲೀಸರು ತಡೆದಿದ್ದಾರೆ. ಈ ವೇಳೆ ಸ್ಥಳದಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ ನಾಯ್ಡು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಚಂದ್ರಬಾಬು ನಾಯ್ಡು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಸಿಕೆ ಪಡೆದ ‘ವಿಶ್ವ ನಾಯಕ’ ರ ಪಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಸೇರ್ಪಡೆ
ಚಿತ್ತೂರಿನಲ್ಲಿ ಪಕ್ಷದ ಪರವಾಗಿ ಚಂದ್ರಬಾಬು ನಾಯ್ಡು ಪ್ರಚಾರಕ್ಕೆ ತೆರಳುತ್ತಿದ್ದರು. ಪೊಲೀಸರ ನಡೆ ಖಂಡಿಸಿರುವ ಚಂದ್ರಬಾಬು ನಾಯ್ಡು, ನೀವು ನಮ್ಮನ್ನು ತಡೆಯಲು ಸಾಧ್ಯವಿಲ್ಲ, ಇಷ್ಟಕ್ಕೆ ನಾವು ಸುಮ್ಮನಾಗಿರುವುದೂ ಇಲ್ಲ, ನಾನು ಜನರ ಬಳಿ ಹೋಗುವುದನ್ನು ತಡೆಯಲು ಸರ್ಕಾರದ ಪ್ರಾಯೋಜಿತ ಮಾರಾಟಗಾರರಿಂದ ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ. ಈ ನಡುವೆ ಟಿಡಿಪಿ ನಾಯಕರೂ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.