alex Certify ಲಸಿಕೆ ಪಡೆದ ‘ವಿಶ್ವ ನಾಯಕ’ ರ ಪಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಸೇರ್ಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ಪಡೆದ ‘ವಿಶ್ವ ನಾಯಕ’ ರ ಪಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಸೇರ್ಪಡೆ

ದೇಶದಲ್ಲಿ ಇಂದಿನಿಂದ ಆರಂಭವಾಗಿರುವ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ ಮೊದಲ ಡೋಸ್​ ಸ್ವೀಕರಿಸುವ ಮೂಲಕ ಪ್ರಧಾನಿ ಮೋದಿ ಕೋವಿಡ್​ ಲಸಿಕೆ ಪಡೆದ ವಿಶ್ವದ ಗಣ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರಧಾನಿ ಮೋದಿಯ ಈ ನಡೆ ಬಳಿಕ ಜನರಲ್ಲಿ ಕೊರೊನಾ ಲಸಿಕೆ ಪಡೆಯಲು ಇದ್ದ ಹಿಂಜರಿಕೆ ದೂರವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್​, ಇಸ್ರೆಲ್​ ಪ್ರಧಾನಿ ಬೆಂಜಮಿನ್​ ನೆತನ್ಯಾಹು ಹಾಗೂ ಇಂಡೋನೇಷಿಯಾದ ಜೋಕೋ ವಿಡೊಡೊ ಜನರಲ್ಲಿ ಆತ್ಮ ವಿಶ್ವಾಸ ತುಂಬುವ ಸಲುವಾಗಿ ಮೊದಲು ಲಸಿಕೆಯನ್ನ ಪಡೆದಿದ್ದರು.

ಇನ್ನುಳಿದಂತೆ ಪೋಪ್​ ಫ್ರಾನ್ಸಿಸ್​, ಸೌದಿ ಕಿಂಗ್​ ಸಲ್ಮಾನ್​, ರಾಜ ಮೊಹಮ್ಮದ್ ಬಿನ್​ ಸಲ್ಮಾನ್​, ಬ್ರಿಟನ್​ ರಾಣಿ ಎಲೆಜಬೆತ್​ ಹಾಗೂ ಪ್ರಿನ್ಸ್ ಫಿಲಿಪ್​ ಕೂಡ ಕೊರೊನಾ ಲಸಿಕೆ ಪಡೆದಿದ್ದಾರೆ. ಮಂಗೋಲಿಯಾ ಪ್ರಧಾನಿ ಹಾಗೂ ಮಾಲ್ಡೀವ್ಸ್ ಅಧ್ಯಕ್ಷರಿಬ್ಬರೂ ಭಾರತದಲ್ಲಿ ನಿರ್ಮಾಣವಾದ ಕೊರೊನಾ ಲಸಿಕೆ ಪಡೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಂದು ಏಮ್ಸ್​ನಲ್ಲಿ ಕೋವ್ಯಾಕ್ಸಿನ್​ ಲಸಿಕೆಯ ಮೊದಲ ಡೋಸ್​ನ್ನು ಪಡೆದಿದ್ದಾರೆ. ಪ್ರಧಾನಿ ಮೋದಿಗೆ ಹಿರಿಯ ನರ್ಸ್ ಪಿ. ನಿವೇದಾ ಹಾಗೂ ರೊಸಮ್ಮ ಅನಿಲ್​ ಲಸಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...