ದೇಶದಲ್ಲಿ ಇಂದಿನಿಂದ ಆರಂಭವಾಗಿರುವ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ ಮೊದಲ ಡೋಸ್ ಸ್ವೀಕರಿಸುವ ಮೂಲಕ ಪ್ರಧಾನಿ ಮೋದಿ ಕೋವಿಡ್ ಲಸಿಕೆ ಪಡೆದ ವಿಶ್ವದ ಗಣ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರಧಾನಿ ಮೋದಿಯ ಈ ನಡೆ ಬಳಿಕ ಜನರಲ್ಲಿ ಕೊರೊನಾ ಲಸಿಕೆ ಪಡೆಯಲು ಇದ್ದ ಹಿಂಜರಿಕೆ ದೂರವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಇಸ್ರೆಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಇಂಡೋನೇಷಿಯಾದ ಜೋಕೋ ವಿಡೊಡೊ ಜನರಲ್ಲಿ ಆತ್ಮ ವಿಶ್ವಾಸ ತುಂಬುವ ಸಲುವಾಗಿ ಮೊದಲು ಲಸಿಕೆಯನ್ನ ಪಡೆದಿದ್ದರು.
ಇನ್ನುಳಿದಂತೆ ಪೋಪ್ ಫ್ರಾನ್ಸಿಸ್, ಸೌದಿ ಕಿಂಗ್ ಸಲ್ಮಾನ್, ರಾಜ ಮೊಹಮ್ಮದ್ ಬಿನ್ ಸಲ್ಮಾನ್, ಬ್ರಿಟನ್ ರಾಣಿ ಎಲೆಜಬೆತ್ ಹಾಗೂ ಪ್ರಿನ್ಸ್ ಫಿಲಿಪ್ ಕೂಡ ಕೊರೊನಾ ಲಸಿಕೆ ಪಡೆದಿದ್ದಾರೆ. ಮಂಗೋಲಿಯಾ ಪ್ರಧಾನಿ ಹಾಗೂ ಮಾಲ್ಡೀವ್ಸ್ ಅಧ್ಯಕ್ಷರಿಬ್ಬರೂ ಭಾರತದಲ್ಲಿ ನಿರ್ಮಾಣವಾದ ಕೊರೊನಾ ಲಸಿಕೆ ಪಡೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಂದು ಏಮ್ಸ್ನಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ನ್ನು ಪಡೆದಿದ್ದಾರೆ. ಪ್ರಧಾನಿ ಮೋದಿಗೆ ಹಿರಿಯ ನರ್ಸ್ ಪಿ. ನಿವೇದಾ ಹಾಗೂ ರೊಸಮ್ಮ ಅನಿಲ್ ಲಸಿಕೆ ನೀಡಿದ್ದಾರೆ.