ಕೊರೊನಾ ಸಂಕಷ್ಟ, ಹವಾಮಾನ ವೈಪರೀತ್ಯ ಈ ಎಲ್ಲಾ ಸಮಸ್ಯೆಗಳ ನಡುವೆಯೂ ಡೆಲಿವರಿ ಬಾಯ್ಗಳು ತಮ್ಮ ಕಾರ್ಯವನ್ನ ಅಚ್ಚುಕಟ್ಟಾಗಿ ನಿಭಾಯಿಸ್ತಾ ಇದಾರೆ. ಸರಿಯಾದ ಸಮಯಕ್ಕೆ ಸರಿಯಾದ ಸ್ಥಳಕ್ಕೆ ಆರ್ಡರ್ ತಲುಪಿಸೋದು ಅಂದರೆ ಸುಲಭದ ಮಾತಂತೂ ಅಲ್ಲವೇ ಅಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಡೆಲಿವರಿ ಬಾಯ್ ಒಬ್ಬ ತನ್ನ ನೋವಿನ ಕತೆಯನ್ನ ಹೇಳಿಕೊಂಡಿದ್ದು ನೆಟ್ಟಿಗರ ಕಣ್ಣಂಚು ತೇವವಾಗಿದೆ. ರಿಲೇ ಎಲಿಯಾಟ್ ಎಂಬಾತ ಗ್ರಾಹಕರಿಂದ ತನಗಾದ ನೋವಿನ ಬಗ್ಗೆ ಹೇಳಿಕೊಳ್ಳುತ್ತಾ ಭಾವುಕನಾಗಿದ್ದಾನೆ.
ಈ ವಿಡಿಯೋವನ್ನ ಮೊದಲು ಟಿಕ್ಟಾಕ್ನಲ್ಲಿ ಶೇರ್ ಮಾಡಲಾಗಿದೆ. ನಾನು ಡೆಲಿವರಿ ನೀಡಲು 45 ನಿಮಿಷಗಳನ್ನ ವ್ಯಯಿಸಿದೆ. ಗ್ರಾಹಕ ಮನೆಯಿಂದ ಹೊರಬರಲು ನಿರಾಕರಿಸಿದ ಕಾರಣ ನಾನು ಪಾರ್ಕಿಂಗ್ ಶುಲ್ಕವನ್ನೂ ಪಾವತಿ ಮಾಡಬೇಕಾಯ್ತು. ನನಗೆ ಆ ಗ್ರಾಹಕ 1.50 ಡಾಲರ್ನ್ನು ಟಿಪ್ಸ್ ರೂಪದಲ್ಲಿ ನೀಡಿದ್ರು. ಊಬರ್ ನನಗೆ 2.50 ಡಾಲರ್ ಹಣ ನೀಡಿತು. ಆದರೆ ನಾನು 3 ಡಾಲರ್ ನ್ನು ಪಾರ್ಕಿಂಗ್ಗೆ ಖರ್ಚು ಮಾಡಿದ್ದೆ. ನನಗೆ ಬಾಡಿಗೆ ತುಂಬೋಕೂ ಸಾಧ್ಯವಾಗ್ತಿಲ್ಲ ಎಂದು ಆತ ಕಣ್ಣೀರು ಹಾಕಿದ್ದಾನೆ.
https://twitter.com/i/status/1361908911838666753