ಪ್ರಯತ್ನ ಮಾಡುವವರಿಗೆ ಸೂಕ್ತ ಫಲ ಸಿಕ್ಕೇ ಸಿಗುತ್ತೆ ಎಂಬ ಮಾತು ಅಕ್ಷರಶಃ ಸತ್ಯ. ಈ ಮಾತನ್ನ ಸಾಯೇರ್ ಅಬ್ದುಲ್ಲಾ ಹೇಲಿಂಗ್ ಎಂಬವರು ಇದೀಗ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಜಮ್ಮು & ಕಾಶ್ಮೀರದ ಸಾಯೇರ್ ತಮ್ಮ 11ನೇ ವಯಸ್ಸಿನಲ್ಲಿ ಅಪಘಾತಕ್ಕೀಡಾದ ಪರಿಣಾಮ ಬಲಗೈಯನ್ನ ಕಳೆದುಕೊಂಡಿದ್ದಾರೆ. ಶಾಲಾ ಬಸ್ನ್ನು ಹತ್ತುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು ಪರಿಣಾಮ ಸಾಯೇರ್ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುವಂತಾಯ್ತು.
ಒಂದು ಕೈ ಇಲ್ಲದೇ ಇದ್ದರೂ ಸಹ ಸಾಯೇರ್ ಕನಸು ಕಾಣೋದನ್ನ ನಿಲ್ಲಿಸಿರಲಿಲ್ಲ. ವಾಹನ ಚಾಲನೆಯಲ್ಲಿ ಭಾರೀ ಆಸಕ್ತಿ ಹೊಂದಿದ್ದ ಸಾಯೇರ್ಗೆ ಅಂಗವೈಕಲ್ಯ ಅನ್ನೋದು ಅಡ್ಡಿ ಎನಿಸಲೇ ಇಲ್ಲ.
ಖುಲಾಯಿಸಿದ ಅದೃಷ್ಟ: ಲಾಟರಿಯಲ್ಲಿ ಕೋಟಿ ಕೋಟಿ ಬಾಚಿಕೊಂಡ ಗೃಹಿಣಿ
ಸಾಯೇರ್ ಒಂದೇ ಕೈನಲ್ಲೇ ವಾಹನ ಚಲಾಯಿಸೋದನ್ನ ಕಲಿತಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಅವ್ರು, ಬಾಲ್ಯದಿಂದಲೇ ನಾನು ವಾಹನ ಚಾಲನೆ ಬಗ್ಗೆ ಆಕರ್ಷಣೆ ಹೊಂದಿದ್ದೆ. ಇದನ್ನ ನಾನೊಂದು ಸವಾಲಾಗಿ ಸ್ವೀಕರಿಸಿದೆ ಹಾಗೂ ನಾನೀಗ ಒಂದೇ ಕೈನಲ್ಲಿ ಎಷ್ಟು ದೂರ ಬೇಕಿದ್ದರೂ ಡ್ರೈವ್ ಮಾಡಬಲ್ಲೆ ಎಂದು ಹೇಳಿದ್ರು.
ವಾಹನ ಚಾಲನೆ ಮೇಲಿದ್ದ ಆಸಕ್ತಿಯನ್ನೇ ಸಾಧನೆಯಾಗಿ ಬದಲಾಯಿಸಬೇಕು ಅನ್ನೋದು ಸಾಯೇರ್ ಕನಸಾಗಿತ್ತು. ಇದೇ ಸಮಯದಲ್ಲಿ ಸಾಯೇರ್ ಕಾಶ್ಮೀರ್ ಆಫ್ ರೋಡ್ ಎಂಬ ಗುಂಪಿನ ಬಗ್ಗೆ ತಿಳಿದುಕೊಂಡ್ರು. ಈ ಗುಂಪಿನ ಜೊತೆ ಸೇರಿ ಸಾಯೇರ್ ಪರ್ವತ, ಗುಡ್ಡ ಗಾಡು ಪ್ರದೇಶಗಳಲ್ಲಿ ಸಾಹಸದ ವಾಹನ ಚಲಾವಣೆ ಮಾಡಿದ್ದಾರೆ.