alex Certify ಗ್ರಾಹಕರೇ ಗಮನಿಸಿ: ಮಾರ್ಚ್‌ ತಿಂಗಳ ಈ ದಿನಗಳಂದು ಬ್ಯಾಂಕುಗಳಿಗಿದೆ ರಜಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರೇ ಗಮನಿಸಿ: ಮಾರ್ಚ್‌ ತಿಂಗಳ ಈ ದಿನಗಳಂದು ಬ್ಯಾಂಕುಗಳಿಗಿದೆ ರಜಾ

ಮಾರ್ಚ್​ ತಿಂಗಳಲ್ಲಿ 11 ದಿನಗಳ ಕಾಲ ಆರ್​​ಬಿಐ ಕ್ಯಾಲೆಂಡರ್​ನ ಅನುಸಾರ ಬ್ಯಾಂಕ್​ಗಳು ಬಂದ್​ ಇರಲಿವೆ. ಮಾರ್ಚ್ 5, ಮಾರ್ಚ್​ 11, ಮಾರ್ಚ್​ 22, ಮಾರ್ಚ್​ 29 ಹಾಗೂ ಮಾರ್ಚ್​ 30ರಂದು ಸರ್ಕಾರಿ ರಜೆಯಾಗಿದ್ದರೆ ಇನ್ನು ತಿಂಗಳ ಎಲ್ಲಾ ಭಾನುವಾರ ಹಾಗೂ ಎರಡು ಶನಿವಾರ ಬ್ಯಾಂಕ್​ಗೆ ರಜೆ ಇರಲಿದೆ.

ದೇಶದ ಎಲ್ಲಾ ರಾಜ್ಯಗಳಲ್ಲೂ ಸರ್ಕಾರಿ ರಜೆಗಳು ಒಂದೇ ಸಮಯಕ್ಕೆ ಬರಲಿದೆ ಎಂದು ಹೇಳಲು ಸಾಧ್ಯವಿಲ್ಲ. ಭಾನುವಾರ ಹಾಗೂ ಎರಡು ಶನಿವಾರದ ರಜೆಗಳನ್ನ ಹೊರತುಪಡಿಸಿ ಉಳಿದ ರಜೆಗಳು ನಿರ್ದಿಷ್ಟ ರಾಜ್ಯಗಳಿಗೆ ತಕ್ಕಂತೆ ಬದಲಾಗಲೂಬಹುದು. ಬ್ಯಾಂಕ್​ ಗ್ರಾಹಕರು ಅದಕ್ಕೆ ತಕ್ಕಂತೆ ಯೋಜನೆಗಳನ್ನ ರೂಪಿಸಿಕೊಳ್ಳೋದು ಒಳ್ಳೆಯದು.

ಕೇಂದ್ರ ಸರ್ಕಾರದ ಬ್ಯಾಂಕ್​ ಖಾಸಗೀಕರಣವನ್ನ ವಿರೋಧಿಸಿ ಅನೇಕ ಬ್ಯಾಂಕ್​ ಒಕ್ಕೂಟಗಳು ಮುಷ್ಕರಕ್ಕೆ ಕರೆ ನೀಡಿರೋದ್ರಿಂದ ಇದೂ ಸಹ ಬ್ಯಾಂಕಿಂಗ್​ ಸೇವೆಗಳ ಮೇಲೆ ಪರಿಣಾಮ ಬೀರಲಿದೆ. ಮಾರ್ಚ್​ 15 ಹಾಗೂ 16ರಂದು ಎರಡು ದಿನಗಳ ಮುಷ್ಕರ ಇರಲಿದೆ. ಬ್ಯಾಂಕ್​ ಒಕ್ಕೂಟಗಳು ಮಾರ್ಚ್​ 10ರಂದು ದೆಹಲಿ ಸಂಸತ್ತಿನತ್ತ ಮೆರವಣಿಗೆ ನಡೆಸಲು ಪ್ಲಾನ್​ ಮಾಡಿದೆ. ಸರ್ಕಾರ ಇದೇ ರೀತಿ ಕ್ರಮವನ್ನ ಮುಂದುವರಿಸಿದ್ರೆ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳೋದಾಗಿ ಬ್ಯಾಂಕ್​ ನೌಕರರ ಸಂಘ ಎಚ್ಚರಿಕೆ ನೀಡಿದೆ.

ಮಾರ್ಚ್​ 5 : ಮಿಜೋರಾಂನ ಬ್ಯಾಂಕ್​​​ಗಳಿಗೆ ರಜೆ

ಮಾರ್ಚ್​ 7: ಭಾನುವಾರ

ಮಾರ್ಚ್​ 11: ಮಹಾಶಿವರಾತ್ರಿ

ಮಾರ್ಚ್ 13: ಎರಡನೇ ಶನಿವಾರ

ಮಾರ್ಚ್ 14: ಭಾನುವಾರ

ಮಾರ್ಚ್​ 21: ಭಾನುವಾರ

ಮಾರ್ಚ್​ 22: ಬಿಹಾರ ದಿನ

ಮಾರ್ಚ್​ 27: ನಾಲ್ಕನೇ ಶನಿವಾರ

ಮಾರ್ಚ್​ 28: ಭಾನುವಾರ

ಮಾರ್ಚ್​ 29: ಧುಲೇತಿ

ಮಾರ್ಚ್‌ 30: ಹೋಳಿ

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...