alex Certify ವಿಶ್ವ ದಾಖಲೆಯ ಗಡ್ಡೆಕೋಸು ಬೆಳೆದ ಕೃಷಿಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ದಾಖಲೆಯ ಗಡ್ಡೆಕೋಸು ಬೆಳೆದ ಕೃಷಿಕ….!

ಕೃಷಿ ಮಾಡಬೇಕು ಅಂದರೆ ಎಲ್ಲಕ್ಕಿಂತ ಮೊದಲು ಶ್ರದ್ಧೆ ಮುಖ್ಯ, ಸರಿಯಾದ ಸಮಯಕ್ಕೆ ಗಿಡಗಳನ್ನ ಪೋಷಣೆ ಮಾಡೋದು ಅಂದರೆ ಸುಲಭದ ಕೆಲಸವಂತೂ ಅಲ್ಲ. ಆದರೆ ಕೆಲವರ ಆಸಕ್ತಿ ಯಾವ ಮಟ್ಟಿಗೆ ಇರುತ್ತೆ ಅಂದರೆ ಅವರು ತಮ್ಮ ಹಿತ್ತಲಲ್ಲಿ ಕೃಷಿ ಮಾಡೋದ್ರ ಜೊತೆಗೆ ಕೃಷಿ ಕ್ಷೇತ್ರದಲ್ಲಿ ಸಾಧನೆಯನ್ನೂ ಮಾಡ್ತಾರೆ.

ಈ ಮಾತಿಗೆ ಸಾಕ್ಷಿ ಎಂಬಂತೆ ಕೆನಡಾದ ಡೇಮಿನ್​ ಅಲಾರ್ಡ್​ ಎಂಬವರು ತರಕಾರಿ ಬೆಳೆಯೋದ್ರಲ್ಲಿ ಸಿಕ್ಕಾಪಟ್ಟೆ ಆಸಕ್ತಿಯನ್ನ ಹೊಂದಿದ್ದರು. ಇವರ ಜಮೀನಿನಲ್ಲಿ ಬೆಳೆದ ಇತ್ತೀಚಿನ ಫಲವೊಂದು ಅಲಾರ್ಡ್​ರನ್ನ ಗಿನ್ನೆಸ್​ ದಾಖಲೆಯ ಪುಟದಲ್ಲಿ ಹೆಸರು ಬರೆಯಿಸುವಂತೆ ಮಾಡಿದೆ.

ವರ್ಷಾನುಗಟ್ಟಲೇ ಪಟ್ಟ ಶ್ರಮದ ಬಳಿಕ ಅರ್ಲಾಡ್​ ತಮ್ಮ ಜಮೀನಿನಲ್ಲಿ ಗಡ್ಡೆಕೋಸನ್ನ ಬೆಳೆದಿದ್ದಾರೆ. ಹಾಗೂ ಈ ಮೂರು ಗಡ್ಡೆಗಳು ಅಲಾರ್ಡ್​ರಿಗೆ ವಿಶ್ವ ದಾಖಲೆಯ ಗರಿಮೆಯನ್ನ ತಂದುಕೊಟ್ಟಿವೆ.

ಮೊದಲ ಗಡ್ಡೆ 22.9 ಕೆಜಿ ತೂಕವನ್ನ ಹೊಂದಿದ್ದರೆ, ಎರಡನೆಯದು 24.4 ಕೆಜಿ ಹಾಗೂ ಮೂರನೆಯದು 29 ಕೆಜಿ ತೂಕ ಹೊಂದಿದೆ ಎನ್ನಲಾಗಿದೆ. ಈ ಮೂಲಕ ಈ ಮೂರು ಗಡ್ಡೆಗಳು ಹಿಂದಿನ ವಿಶ್ವ ದಾಖಲೆ ಸೃಷ್ಟಿಸಿದ್ದ 17.7 ಕೆಜಿ ತೂಕದ ಗೆಡ್ಡೆ ಕೋಸಿನ ದಾಖಲೆಯನ್ನ ಸರಿಗಟ್ಟಿವೆ.

ಅಂದಹಾಗೆ ಈ ರೀತಿ ದೈತ್ಯ ಗೆಡ್ಡೆಕೋಸನ್ನ ಬೆಳೆಯಬೇಕು ಅನ್ನೋದು ಅರ್ಲಾಡ್​ರ ನಿನ್ನೆ ಮೊನ್ನೆಯ ಆಸೆ ಆಗಿರಲಿಲ್ಲ. 2016ರಲ್ಲೂ ಇದೇ ಪ್ರಯತ್ನ ಮಾಡಿದ್ದ ಅರ್ಲಾಡ್​ 7 ಕೆಜಿ ತೂಕದ ಗಡ್ಡೆಯನ್ನ ಹೊರತೆಗೆಯುವಲ್ಲಷ್ಟೇ ಶಕ್ತರಾಗಿದ್ದರು. ಇದರಿಂದ ಸ್ಪೂರ್ತಿ ಪಡೆದ ಅರ್ಲಾಡ್​ ಕೊನೆಗೂ ವಿಶ್ವ ದಾಖಲೆಯ ಪುಟದಲ್ಲಿ ತಮ್ಮ ಹೆಸರನ್ನ ನೋಂದಾಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

 

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...