ಫುಡ್ ಆರ್ಡರ್ ಮಾಡಿದ್ದ ಬ್ರಿಟನ್ನ ವ್ಯಕ್ತಿಯೊಬ್ಬ ಬಾಟಲಿಯಲ್ಲಿ ಹಳದಿ ಬಣ್ಣದ ದ್ರವವೊಂದನ್ನ ತುಂಬಿರೋದನ್ನ ಕಂಡು ಶಾಕ್ ಆಗಿದ್ದಾರೆ. ಕೊಕೊ ಕೋಲಾ ಆರ್ಡರ್ ಮಾಡಿದ್ದ ವ್ಯಕ್ತಿಗೆ ಬಾಟಲಿಯಲ್ಲಿ ಮೂತ್ರವನ್ನ ತುಂಬಿಸಿಕೊಡಲಾಗಿದೆ ಎಂಬ ವಿಚಾರ ಬಳಿಕ ಬೆಳಕಿಗೆ ಬಂದಿದೆ.
ಒಲಿವರ್ ಮ್ಯಾಕ್ಮ್ಯಾನಸ್ ಹೆಲ್ಲೋ ಫ್ರೆಶ್ ಎಂಬಲ್ಲಿ ಊಟವನ್ನ ಬುಕ್ ಮಾಡಿದ್ದರು. ಈ ವೇಳೆ ಕೊಕೊ ಕೋಲಾ ಬಾಟಲಿಯನ್ನೂ ಒಲಿವರ್ ಬುಕ್ ಮಾಡಿದ್ದರು. ಈ ವಿಚಾರವಾಗಿ ಟ್ವೀಟ್ ಮಾಡಿರುವ ಒಲಿವರ್, ನನಗೆ ಆರ್ಡರ್ ಜೊತೆಯಲ್ಲಿ ಯಾರದ್ದೋ ಮೂತ್ರವನ್ನ ಏಕೆ ಕಳುಹಿಸಿಕೊಟ್ಟಿದ್ದೀರಾ..? ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿರುವೆ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ನೆಟ್ಟಿಗರೊಬ್ಬರು ಸೇಬು ಹಣ್ಣಿನ ಜ್ಯೂಸ್ ಇರಬಹುದು ಎಂದು ಊಹಿಸಿದ್ದಾರೆ. ಆದರೆ ಈ ಕಮೆಂಟ್ಗೆ ಪ್ರತಿಕ್ರಿಯಿಸಿರುವ ಆಲಿವರ್, ನಿಮ್ಮ ಮನೆಯ ವಿಳಾಸ ಕೊಡು, ಇದನ್ನ ನಿನಗೆ ಕಳುಹಿಸಿ ಕೊಡ್ತೇನೆ ಎಂದು ಹೇಳಿದ್ದಾರೆ.
ಆದರೆ ಹೆಲ್ಲೋಫ್ರೆಶ್ ಎಂದಿಗೂ ಊಟದ ಆರ್ಡರ್ ಜೊತೆ ಪಾನೀಯವನ್ನ ನೀಡೋದಿಲ್ಲ. ಹೀಗಾಗಿ ಇದು ಡೆಲಿವರಿ ಬಾಯ್ ಟಾಯ್ಲೆಟ್ ಹೋಗಲು ಆಗದೇ ಈ ಕೃತ್ಯ ಎಸಗಿರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಒಲಿವರ್ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಹೆಲ್ಲೋ ಫ್ರೆಶ್, ಒಲಿವರ್ ಬಳಿ ಕ್ಷಮೆಯಾಚಿಸಿದೆ.