ಭಾರತೀಯ ಕಂಪನಿಗಳು ಈ ವರ್ಷ ತಮ್ಮ ಉದ್ಯೋಗಿಗಳಿಗೆ ಅಂದಾಜು 7.7 ಪ್ರತಿಶತ ಸಂಬಳ ಏರಿಕೆ ಮಾಡುವ ಸಾಧ್ಯತೆ ಇದೆ ಎಂಬ ಅಂಶ ಭಾರತೀಯ ಸಂಬಳ ಏರಿಕೆ ಸರ್ವೆಯಲ್ಲಿ ತಿಳಿದು ಬಂದಿದೆ. ಆದರೆ ಈ ವರ್ಷದ ನಿಮ್ಮ ಸಂಬಳ ಏರಿಕೆಯು ನಿಮ್ಮ ಟೇಕ್ ಹೋಂ ಮೊತ್ತವನ್ನ ಹೆಚ್ಚು ಮಾಡದು. ಬದಲಾಗಿ ನಿಮ್ಮ ಭವಿಷ್ಯ ನಿಧಿಯ ಮೊತ್ತವನ್ನ ಹೆಚ್ಚು ಮಾಡಲಿದೆ ಎನ್ನಲಾಗಿದೆ.
20 ಇಂಡಸ್ಟ್ರಿಯ ಸುಮಾರು 1200 ಕಂಪನಿಗಳ ಮೇಲೆ ನಡೆಸಲಾದ ಅಧ್ಯಯನದ ಮೂಲಕ ಈ ಅಂಶ ತಿಳಿದುಬಂದಿದೆ. ಈ ಬಾರಿಯ ವೇತನ ಏರಿಕೆಯು ಉದ್ಯೋಗಿಯ ಗ್ರ್ಯಾಚುಟಿ, ಭವಿಷ್ಯ ನಿಧಿಯಂತಹ ಯೋಜನೆಗಳಿಗೆ ಹೆಚ್ಚಿನ ಪರಿಹಾರ ನೀಡಬಹುದು ಎಂದು ಈ ಸರ್ವೇ ಹೇಳಿದೆ.
LPG ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್: ಸಬ್ಸಿಡಿ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ..?
ಕೇಂದ್ರ ಸರ್ಕಾರದ ಹೊಸ ವ್ಯಾಖ್ಯಾನಗಳನ್ನ ಆಧರಿಸಿ ಈ ವರ್ಷ ಭವಿಷ್ಯ ನಿಧಿಗೆ ಹೆಚ್ಚಿನ ಕೊಡುಗೆಯನ್ನ ನೀಡಲು ಭಾರತೀಯ ಕಂಪನಿಗಳು ನಿರ್ಧರಿಸಿವೆ ಎನ್ನಲಾಗಿದೆ.